
ತಾಳಗುಪ್ಪ : ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ *ಮಧು ಬಂಗಾರಪ್ಪರವರ ಸ್ವ ಮತ ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆ ಸೊರಬ ವಿಧಾನಸಭಾ ಕ್ಷೇತ್ರದ ಸಾಗರ ತಾಲ್ಲೂಕು ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ತುರ್ತು ಚಿಕಿತ್ಸಾ ಘಟಕದಲ್ಲಿದೆ.
ತಾಳಗುಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರವೂ ಈ ಹಿಂದೇ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ಎಂದೂ ಜನಜನಿತವಾಗಿದ್ದೂ, ಹೆರಿಗೆ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ತಾಳಗುಪ್ಪ ಸುತ್ತಮುತ್ತಲಿನ ಗ್ರಾಮಗಳಿಂದ ಮಾತ್ರಾ ಅಲ್ಲದೇ ದೂರ ದೂರದ ಸಿದ್ದಾಪುರ, ಸೊರಬ, ಶಿಕಾರಿಪುರ ತಾಲ್ಲೂಕಿನಿಂದ ರೋಗಿಗಳು ಆಗಮಿಸುತ್ತಿದ್ದೂ ಶಿವಮೊಗ್ಗ ಜಿಲ್ಲೆಯಲ್ಲೇ ಹೆಸರು ಮಾಡಿದ್ದ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಭೂತ ಬಂಗಲೆಯಂತೆ ಆಗಿರುವುದು ಅಧಿಕಾರಿಗಳ & ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷತನವೇ ಕಾರಣ.
ಹೆಸರಿಗೆ 24 × 7 ಹೆರಿಗೆ ಆಸ್ಪತ್ರೆ ಅಂತಾ ನಾಮಫಲಕಕ್ಕೆ ಸೀಮಿತವಾದ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ, 03 ವೈದ್ಯರು ಇರಬೇಕಾದಲ್ಲಿ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುತ್ತಿರುವುದು ಸ್ವಾತಂತ್ರ ಬಂದು 75 ವಸಂತ ಕಳೆದರೂ ಆರೋಗ್ಯ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತೋರುತ್ತಿರುವ ಅಸಡ್ಡೆ, ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಿ ಸಮುದಾಯ ಆಸ್ಪತ್ರೆ ಮಾಡುವಲ್ಲಿ ಅಧಿಕಾರಿಗಳು & ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕರ್ತವ್ಯದಲ್ಲಿರುವ ನರ್ಸ್ ಮನೆಯಲ್ಲಿದ್ದೂ, ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ನಿಲುಕುವುದೇ ಗಗನಕುಸುಮವಾಗಿದೆ. ಕೂಡಲೇ ಶಿವಮೊಗ್ಗ ಜಿಲ್ಲಾಡಳಿತ ಕರ್ತವ್ಯ ಲೋಪವೆಸಗಿದ ನರ್ಸ್ ವಿರುದ್ಧ ಅಮಾನತ್ತು ಆದೇಶ ಹೊರಡಿಸಿ ನ್ಯಾಯಯುತ ತನಿಖೆ ನೆಡೆಸಿ, ” ತುರ್ತು ನಿಗಾ ಘಟಕ ” ಅವ್ಯವಸ್ಥೆಗೆ ತಲುಪಿದ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಮೇಜರ್ ಆಪರೇಷನ್ ಮಾಡುವಂತೆ ದೂರು ಸಹಿತ ಮನವಿ ಮಾಡುತ್ತೇನೆ, ಈ ಮನವಿ ಸಹಿತ ದೂರನ್ನು ಸಂಭಂದಪಟ್ಟ ಜಿಲ್ಲಾಡಳಿತ ನಿರ್ಲಕ್ಷ ಮಾಡಿದರೇ ನ್ಯಾಯಯುತ ಬೇಡಿಕೆ ಆಗ್ರಹಿಸಿ ಸಾಗರದ ಉಪ ವಿಭಾಗೀಯ ಕಛೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದೂ ಸಾಮಾಜಿಕ ಹೋರಾಟಗಾರ ಓಂಕಾರ ಎಸ್. ವಿ. ತಾಳಗುಪ್ಪ ಎಚ್ಚರಿಕೆ ನೀಡಿದ್ದಾರೆ.


















Leave a Reply