
ಕೊಡವೂರು ವಾರ್ಡಿನ ಚೆನ್ನಂಗಡಿ ಪರಿಸರದಲ್ಲಿ ಸರಕಾರದ ವತಿಯಿಂದ ನಿರ್ಮಾಣವಾದ ಹೊಸ ರಸ್ತೆಯ ಉದ್ಘಾಟನೆ ನಡೆಯಿತು.
ಕೊಡವೂರು ವಾರ್ಡಿನಲ್ಲಿ ಕಳೆದ 4 ವರ್ಷದಿಂದ
ಅನೇಕ ರಸ್ತೆಗಳು ನಿರ್ಮಾಣ ಆಗಿದೆ. ಮೂಲಸೌಕರ್ಯದ ಅಗತ್ಯತೆಯನ್ನು ತಿಳಿದುಕೊಂಡು,ರಸ್ತೆ ನಿರ್ಮಾಣಕ್ಕೆ ಬೇಕಾಗದ ಸ್ಥಳವನ್ನು ನಾಗರಿಕರಿಗೆ ಮನವರಿಕೆ ಮಾಡಿ ಹೊಸ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಕೊಡವೂರು ವಾರ್ಡಿನ ಚೆನ್ನಂಗಡಿ ಪರಿಸರದಲ್ಲಿ ಹಲವಾರು ವರ್ಷಗಳಿಂದ ಮಣ್ಣಿನ ರಸ್ತೆ, ಓಣಿಯಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ. ಮಳೆಗಾಲದ ಸಮಯದಲ್ಲಿ ತಗ್ಗು ಪ್ರದೇಶವಾಗಿರುವುದರಿಂದ ರಸ್ತೆಯಲ್ಲಿ ನೀರು ನಿಂತು ಕೆಸರಿನಿಂದ ನಡೆದುಕೊಂಡು ಹೊಡುವ ಪರಿಸ್ಥಿತಿ. ಇದನ್ನು ತಿಳಿದು ಸ್ಥಳೀಯರೊಂದಿಗೆ ಮಾತನಾಡಿ ಮನವರಿಕೆ ಮಾಡಿ ರಸ್ತೆ ನಿರ್ಮಾಣಕ್ಕೆ ತಮ್ಮ ತಮ್ಮ ಜಾಗವನ್ನು ನೀಡಿ ಸರ್ಕಾರದ ಮತ್ತು ನಗರಸಭೆಯ ವತಿಯಿಂದ ಹೊಸ ರಸ್ತೆ ನಿರ್ಮಾಣ ಮಾಡಿ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಧನಂಜಯ್, ಯಾದವ್,ನವೀನ್, ದೂಜ ಲೂಯಿಸ್, ಮಗ್ಗಿಬಾಯಿಮ್ಮ,ವಿಮಲ ಮತ್ತಿತರರು ಉಪಸ್ಥಿತರಿದ್ದರು.













Leave a Reply