
ಬೈಂದೂರು : ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಸಂಸ್ಥೆಯಿಂದ ದತ್ತು ಸ್ವೀಕಾರ ಪಡೆದ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನೂತನ ರಂಗ ಮಂದಿರದ ಶಂಕುಸ್ಥಾಪನೆ ಗುರುವಾರ ಶಾಲೆಯ ಆವರಣದಲ್ಲಿ ನಡೆಯಿತು. ಬಿಜೂರು ಗುರುಮೂರ್ತಿ ಭಟ್ ಇವರ ನೇತೃತ್ವದಲ್ಲಿ ಶಂಕು ಸ್ಥಾಪನೆಯ ಧಾರ್ಮಿಕ ಕಾರ್ಯ ನಡೆಯಿತು.

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಅಧ್ಯಕ್ಷ ಡಾ ಗೋವಿಂದ ಬಾಬು ಪೂಜಾರಿ, ಕಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಉದ್ಯಮಿ ಭಾಸ್ಕರ್ ಪೂಜಾರಿ, ಬಿಜೂರು ಸ.ಹಿ.ಪ್ರಾ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ಶ್ರೀಧರ್ ಬಿಜೂರು, ಕೃಷ್ಣ ಬಿಜೂರು, ಶಾಲೆಯ ಎಸ್.ಡಿ.ಎಂ. ಸಿ ಅಧ್ಯಕ್ಷೆ ಶಾರದಾ ದೇವಾಡಿಗ,
ರಾಜೇಂದ್ರ ಬಿಜೂರು, ರಾಘವೇಂದ್ರ ದೇವಾಡಿಗ ಬೈಟು, ಜಯರಾಮ ಶೆಟ್ಟಿ, ಆನಂದ ಪೂಜಾರಿ, ತಿಮ್ಮಪ್ಪ ದೇವಾಡಿಗ, ಸುರೇಶ್ ಬಿಜೂರು, ಉಮೇಶ್ ಮೊಗವೀರ, ಸುಬ್ರಹ್ಮಣ್ಯ ಎಸ್.ಬಿ., ರಾಘ ಚಿಕ್ಕಟ್ಟಿ, ಮುಖ್ಯ ಶಿಕ್ಷಕ ಮಂಜುನಾಥ ಎಸ್., ಹಾಗೂ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.














Leave a Reply