Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಳೆಯಿಂದ 3 ದಿನಗಳ ಕಾಲ ತೋಟಗಾರಿಕೆ ಮೇಳ | 24 ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಸನ್ಮಾನ
ತೋಟಗಾರಿಕೆ ಮೇಳಕ್ಕೆ ಸಕಲ ಸಿದ್ದತೆ : ಡಾ.ವಿಷ್ಣುವರ್ಧನ

ವರದಿ : ಅಶ್ವಿನಿ ಅಂಗಡಿ ಬಾದಾಮಿ

ಬಾಗಲಕೋಟೆ:  ಡಿಸೆಂಬರ 19 (ಕರ್ನಾಟಕ ವಾರ್ತೆ) : ತೋಟಗಾರಿಕೆ ಉದ್ಯಾನಗಿರಿಯ ಮುಖ್ಯ ಆವರಣದಲ್ಲಿ ಡಿಸೆಂಬರ 21 ರಿಂದ 23 ವರೆಗೆ ನಡೆಯಲಿರುವ ತೋಗಾರಿಕೆ ಮೇಳಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋವಿವಿಯ ಆವರಣದಲ್ಲಿರುವ ರೈತ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವರ್ಷ ಮೇಳದಲ್ಲಿ 100 ಸುಸಜ್ಜಿತ, 100 ಸಾಮಾನ್ಯ, 15 ಯಂತ್ರೋಪಕರಣಗಳ ಹಾಗೂ 15 ಆಹಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ತೋಟಗಾರಿಕೆಯಲ್ಲಿ ಬಳಸಬಹುದಾದ ವಿವಿಧ ಕೃಷಿ ಪರಿಕರಗಳಾದ ಬೀಜಗಳು, ಸಸಿಗಳು, ಕೀಟನಾಶಕಗಳು, ಗೊಬ್ಬರಗಳು, ಯಂತ್ರೋಪಕರಣಗಳ ಮಾರಾಟ ಹಾಗೂ ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಡಿಸೆಂಬರ 21 ರಂದು ಬೆಳಿಗ್ಗೆ 11 ಗಂಟೆಗೆ ಜರಗುವ ತೋಟಗಾರಿಕೆ ಮೇಳಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಲಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪಸ್ಥಿತರಿರುವರು. ಅಧ್ಯಕ್ಷತೆಯನ್ನು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ವಹಿಸಲಿದ್ದು, ಜಿಲ್ಲೆಯ ಇತರೆ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಮೊದಲ ದಿನ 24 ಜಿಲ್ಲೆಯ ಪೈಕಿ 8 ಶ್ರೇಷ್ಠ ತೋಟಗಾರಿಕೆ ರೈತರನ್ನು ಸನ್ಮಾನಿಸಲಾಗುತ್ತಿದೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಮಳಿಗೆ, ವಿವಿಧ ಪ್ರಾತ್ಯಕ್ಷಿಕೆಗಳನ್ನು ಉದ್ಘಾಟನೆ, ಮಧ್ಯಾಹ್ನ ವಿಚಾರ ಗೋಷ್ಠಿಗಳು ಜರುಗಲಿವೆ ಎಂದರು.

ಎರಡನೇ ದಿನ ಡಿ.22 ರಂದು 8 ಜಿಲ್ಲೆಗಳ ಫಲಶ್ರೇಷ್ಠ ರೈತರನ್ನು ಗೌರವಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೃಹತ್, ಮದ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಜವಳಿ, ಸಹಕಾರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಲಿದ್ದಾರೆ. ನಂತರ ತಾಂತ್ರಿಕಗೋಷ್ಠಿ ನಡೆಯಲಿವೆ. ಡಿ.23 ರಂದು ಮದ್ಯಾಹ್ನ 2 ಗಂಟೆಗೆ ರಾಷ್ಟಿçಯ ರೈತ ದಿನಾಚರಣೆ ಆಚರಣೆಯೊಂದಿಗೆ 8 ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ತೋಟಗಾರಿಕೆ ಸಚಿವರು, ಬಾಗಲಕೋಟೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷರು ಸೇರಿದಂತೆ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮೇಳದಲ್ಲಿ ವಿಶ್ವವಿದ್ಯಾಲಯ ಹಾಗೂ ಇನ್ನಿತರೆ ಸಂಸ್ಥೆಗಳಿAದ ಅಭಿವೃದ್ದಿಪಡಿಸಲಾದ ತಳಿಗಳು ಹಾಗೂ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳು, ರೈತರಿಗಾಗಿ ತಾಂತ್ರಿಕ ಸಲಹಾ ಕೇಂದ್ರ ಹಾಗೂ ಶ್ವಾನ ಮತ್ತು ಮತ್ಸö್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ವಿಶೇಷವಾಗಿ ಕ್ಷೇತ್ರ ಪ್ರಾತ್ಯಕ್ಷಿಕೆಗಳು, ವಿಷಯಾಧಾರಿತ ಸಮುಚ್ಛಯಗಳು, ಒಳಾಂಗಣ ಪ್ರದರ್ಶನ, ವಿಶೇಷ ಮಾರಾಟ ಮಳಿಗೆಗಳನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಬರುವ ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಪ್ರಾರಂಭದಲ್ಲಿ ತೋವಿವಿಯ ಆವರಣದಲ್ಲಿ ಬೆಳೆದ ವಿವಿಧ ತರಹದ ಪುಷ್ಪ, ಹೊಸ ತಳಿಗಳ ತರಕಾರಿ ತಾಕುಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಿದರು. ಪತ್ರಿಕಾಗೊಷ್ಠಿಯಲ್ಲಿ ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಶಿಕ್ಷನ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದಿನ, ಡೀನ್ ವಿದ್ಯಾರ್ಥಿ ಕಲ್ಯಾಣ ಡಾ.ರಾಮಚಂದ್ರ ನಾಯ್ಕ ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *