
ಕೋಟ: ಮಲ್ಪೆ ವಾಸುದೇವ ಸಾಮಗರು ಯಕ್ಷಗಾನದಲ್ಲಿ ಅತ್ಯಂತ ಜನಜನಿತವಾದ ಹೆಸರು. ಯಕ್ಷಗಾನಕ್ಕೆ ವಿದ್ವತ್ತಿನ ಆಯಾಮವನ್ನು ಕೊಟ್ಟ ಮಲ್ಪೆಯ ಸಾಮಗ ಮನೆತನದಲ್ಲಿ, ರಾಮದಾಸ ಸಾಮಗ ಮತ್ತು ನಾಗರತ್ನ ದಂಪತಿಗಳ ಎರಡನೇ ಮಗನಾಗಿ ಜನಿಸಿದ ವಾಸುದೇವ ಸಾಮಗರು ಆಟ, ಕೂಟ, ಹರಿಕಥೆ, ಬಡಗುತಿಟ್ಟು-ತೆಂಕುತಿಟ್ಟುಗಳೆAಬ ಭೇದವಿಲ್ಲದೇ ಸವ್ಯಸಾಜಿಯಾಗಿ ಜನಜನಿತರಾದವರು.
ಕಲಾವಿದರಾಗಿ ಅಮೃತೇಶ್ವರಿ ಮೇಳದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಸಾಮಗರು, ನಂತರದಲ್ಲಿ ಧರ್ಮಸ್ಥಳ, ಇರಾ, ಸಾಲಿಗ್ರಾಮ, ಪೆರ್ಡೂರು, ಕರ್ನಾಟಕ, ಕಾಟಿಪಳ್ಳ, ಬಗ್ವಾಡಿ, ಸೌಕೂರು ಮೊದಲಾದ ಮೇಳಗಳಲ್ಲಿ ಸತತವಾಗಿ ಮೂವತ್ತು ವರ್ಷಗಳಿಗೂ ಹೆಚ್ಚಿನ ಕಾಲ ತೊಡಗಿಸಿಕೊಂಡು, ನಂತರದಲ್ಲಿ ಮೇಳಗಳ ತಿರುಗಾಟದಿಂದ ನಿರ್ವತ್ತರಾದರು. ಆದರೆ ಯಕ್ಷಗಾನದಲ್ಲಿ ಪ್ರವೃತ್ತರಾಗಿಯೇ ಉಳಿದ ಅವರು, ‘ಸಂಯಮ’ ಎಂಬ ತಾಳಮದ್ದಳೆ ಮೇಳವನ್ನು ಕಟ್ಟಿ ಹದಿನೇಳು ವರ್ಷಗಳ ಕಾಲ ನಿರಂತರ ತಿರುಗಾಟ ಮಾಡಿದವರು. ಧ್ವನಿ, ಬೆಳಕು, ವೇದಿಕೆ, ವಾಹನ ಮತ್ತು ಸಮವಸ್ತç ಸಹಿತ ಕಲಾವಿದರೊಂದಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ, ಕರ್ನಾಟಕ ಉದ್ದಗಲಕ್ಕೂ ತಾಳಮದ್ದಳೆಯನ್ನು ಪಸರಿಸಿದ ಕೀರ್ತಿ ಸಂಯಮ ತಂಡಕ್ಕಿದೆ. ಬರವಣಿಗೆಯಲ್ಲೂ ತೊಡಗಿಸಿಕೊಂಡ ಸಾಮಗರು ನೂರೈವತ್ತು ನಲ್ನುಡಿಗಳು, ಎಂಬತ್ತು ಪ್ರಸಂಗಗಳು, ಸಾಮಗಾಥೆ, ಯಕ್ಷರಸಾಯನ ಮೊದಲಾದ ಪುಸ್ತಕಗಳನ್ನು ತಮ್ಮದೇ ಸಂಯಮA ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಇವುಗಳು ಯಕ್ಷ ಕಲಾವಿದರಿಗೆ ಅವಶ್ಯ ಆಕರಗಳಾಗಿ ಸಹಾಯಿಯಾಗಿವೆ. ವೀರ ಕೌಂಡ್ಲಿಕ, ರುಕ್ಮಿಣೀ ಕಲ್ಯಾಣ, ಸತೀ ಸೀಮಂತಿನಿ, ಶ್ರೀ ಕೃಷ್ಣ ತುಲಾಭಾರ ಮೊದಲಾದ ಪ್ರಸಂಗಗಳನ್ನು ರಚಿಸಿದ ಕವಿಯೂ ಹೌದು. ಹರಿಕಥಾ ವಿದ್ವಾಂಸರಾಗಿಯೂ ಜನಮನ್ನಣೆ ಗಳಿಸಿದವರು. ಕವಿ, ಪ್ರಕಾಶಕ, ಸಂಘಟಕ, ವಿದ್ವಾಂಸ, ಅರ್ಥದಾರಿ, ವೇಷದಾರಿ ಮೊದಲಾದ ಹಲವು ಮುಖಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ ಸಾಮಗರು ನವೆಂಬರ್, 7, 2020ರಂದು ಇಹಲೋಕ ತ್ಯಜಿಸಿದ್ದರು.
ಇವರ ನಾಲ್ಕನೇ ಸಂಸ್ಮರಣೆಯು ಸಂಯಮA ಹಾಗೂ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 21, 2024ರಂದು ಮಧ್ಯಾಹ್ನ 2ರಿಂದ ತೆಕ್ಕಟ್ಟೆ ಹಯಗ್ರೀವದಲ್ಲಿ ನೆರವೇರಲಿದೆ. ಕಾರ್ಯಕ್ರಮದ ಪ್ರತೀ ಅಂಗದಲ್ಲಿಯೂ ಸಾಮಗರ ಸ್ಮರಣೆ ಕಾಣುವಂತೆ ವಿಶಿಷ್ಟವಾಗಿ ಆಯೋಜಿಸಲಾಗಿದ್ದು, ಸಾಮಗರ ನಿಕಟವರ್ತಿಗಳಾಗಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದ ಎಮ್. ಎಲ್. ಸಾಮಗ, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಪಂಚಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಉದ್ಯಮಿಗಳಾದ ಡಾ. ವೈಕುಂಠ ಹೇರ್ಳೆ, ಪ್ರಸಿದ್ಧ ಅರ್ಥದಾರಿಯಾದ ಉಜಿರೆ ಅಶೋಕ್ ಭಟ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಮೊದಲಾದವರು ಜೊತೆಯಾಗಲಿದ್ದಾರೆ. ಅಮೃತೇಶ್ವರಿ ಮೇಳದಲ್ಲಿ ಸಾಮಗರ ಒಡನಾಡಿಯಾಗಿದ್ದ ಪ್ರಸಿದ್ಧ ಸ್ತಿçÃವೇಷಧಾರಿ ಎಂ.ಎ. ನಾಯ್ಕರಿಗೆ ಸಾಮಗ ಪ್ರಶಸ್ತಿ ಪ್ರಧಾನವಾಗಲಿದೆ. ಕಾರ್ಯಕ್ರಮದ ಮೊದಲಾರ್ಧದಲ್ಲಿ ಸಾಮಗರು ಅರ್ಥ ಬರೆದ ‘ಯಕ್ಷ ರಸಾಯನ’ ಗ್ರಂಥದಿAದ ಆಯ್ದ ಭಾಗಗಳ ಪಡಿನುಡಿಯಾಗಿ ‘ಯುಗಳ ಸಂವಾದ’ವನ್ನು ಏರ್ಪಡಿಸಲಾಗಿದೆ. ಸಂಜೆ 5ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸಾಮಗರ ಪರಿಕಲ್ಪನೆಯ ನವೀನ ಪ್ರಯೋಗವಾದ “ದುರಂತ ನಾಯಕಿ” ಎಂಬ ಯಕ್ಷನಾಟಕ ನಡೆಯಲಿಕ್ಕಿದೆ. ಕಾರ್ಯಕ್ರಮದಲ್ಲಿ ಪ್ರಕಾಶ ಕಿರಾಡಿ, ವಿಶ್ವನಾಥ ಹೆನ್ನಬೈಲ್, ಮಾಧವ ನಾಗೂರು, ಶಶಾಂಕ ಪಟೇಲ, ಡಾ. ವೈಕುಂಠ ಹೇರ್ಳೆ, ಡಾ. ಜಗದೀಶ್ ಶೆಟ್ಟಿ, ಅಂಪಾರು ಸತೀಶ್ ಶೆಟ್ಟಿ, ಕುಮಾರ ಶಂಕರನಾರಾಯಣ, ರಾಘವೇಂದ್ರ ತುಂಗ, ಲಂಬೋದರ ಹೆಗಡೆ, ಕೆ.ಜೆ. ಗಣೇಶ್, ಭರತ್ ಚಂದನ್, ರಾಹುಲ್ ಅಮೀನ್, ಶಿವಾನಂದ ಕೋಟ, ಸುದೀಪ ಉರಾಳ, ಮೀರಾ ಸಾಮಗ, ಶ್ಯಾಮಲಾ ವರ್ಣ, ಚಂದ್ರಿಕಾ ಧನ್ಯ, ಮಾ| ಪವನ್ ಆಚಾರ್, ಮಾ| ಸಾತ್ವಿಕ್ ಭಟ್, ಪೂಜಾ ಆಚಾರ್, ಹರ್ಷಿತಾ ಅಮೀನ್, ಮಾ| ರಚಿತ್ ಶೆಟ್ಟಿ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎರಡು ತಲೆಮಾರುಗಳನ್ನು ಪ್ರಭಾವಿಸಿದ ಬಹುಮುಖೀ ವ್ಯಕ್ತಿತ್ವದ ವಾಸುದೇವ ಸಾಮಗರ ಸಂಸ್ಮರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಗಾಭಿಮಾನಿಗಳು ಮತ್ತು ಕಲಾಭಿಮಾನಿಗಳು ಜೊತೆಗೂಡುವ ನಿರೀಕ್ಷೆ ಇದೆಯೆಂದು ಡಾ. ಪ್ರದೀಪ ಸಾಮಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Leave a Reply