
ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದಲ್ಲಿ ಶಾಕಲ ಋಕ್ಸಂಹಿತಾ ಯಾಗಕ್ಕೆ ತಂತ್ರಿಗಳಾದ ಶ್ರೀ ಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಫಲ ಪ್ರಾರ್ಥನೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಿದರು.
ಡಿ.19ರ ಗುರುವಾರದಿಂದ ತೊಡಗಿ ಡಿ.26ರ ಗುರುವಾರದವರೆಗೆ ನಡೆಯಲಿರುವ ಶಾಕಲ ಋಕ್ಸಂಹಿತಾ ಯಾಗದ ಸಂಪನ್ನತೆಗೆ ದೇಗುಲದ ಆಡಳಿತ ಮಂಡಳಿ ಶ್ರೀ ದೇವರ ಅನುಗ್ರಹವನ್ನು ಕೋರಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಮತ್ತು ಪೂರ್ವ ಉಪಾಧ್ಯಕ್ಷ ಗೆಳೆಯರ ಬಳಗ ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಸಾಲಿಗ್ರಾಮದಲ್ಲಿ ಶಾಕಲ ಋಕ್ಸಂಹಿತಾ ಯಾಗಕ್ಕೆ ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಫಲ ಪ್ರಾರ್ಥನೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಮತ್ತಿತರರು ಇದ್ದರು,













Leave a Reply