Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣ ಸಂಸ್ಥೆ ರೈತರೆಡೆಗೆ ನಮ್ಮ ನಡಿಗೆ 42ನೇ ಸರಣಿ ಕಾರ್ಯಕ್ರಮ
ರೈತರೆಡೆಗೆ ಕಾರ್ಯಕ್ರಮದಿಂದಲೇ ಕೃಷಿ ಕಾಯಕಕ್ಕೆ ಶಕ್ತಿ -ಕಾರ್ಕಡ ರಾಜು ಪೂಜಾರಿ

ಕೋಟ: ರೈತ ಸಮುದಾಯದ ಬಗ್ಗೆ ಕಳಕಳಿ ಬಲು ಅಪರೂಪ ಅದರೆ ಪಂಚವರ್ಣ ಸಂಸ್ಥೆಯ ರೈತ ಉತ್ತೇಜನ ಸನ್ಮಾನ ಕಾರ್ಯಕ್ರಮಗಳಿಂದ ಕೃಷಿ ಕಾಯಕ ಹೆಚ್ಚುತ್ತಿದೆ ಇದು  ಹೊಸ ಆಯಾಮಕ್ಕೆ ಮುನ್ನುಡಿ ಬರೆದಿದೆ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ಕಾರ್ಕಡ ರಾಜು ಪೂಜಾರಿ ಹೇಳಿದರು.

ಭಾನುವಾರ ಗುಂಡ್ಮಿತಗ್ಗಿನಬೈಲಿನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ. ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಗೀತಾನಂದ ಫೌಂಡೇಶನ್ ಮಣೂರು,ವಿಪ್ರ ಮಹಿಳಾ ಸಾಲಿಗ್ರಾಮ ವಲಯ,ಜೆಸಿಐ ಸಿನಿಯರ್ ಲಿಜನ್ ಕೋಟ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ,ರೈತಧ್ವನಿ ಸಂಘ ಕೋಟ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 42 ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ ರೈತರಿಲ್ಲದೆ ಸಮಾವಿಲ್ಲ ಸಮಾಜವಿಲ್ಲದೆ ರೈತರಿಲ್ಲ ಎಂಬ ಮಾತಿದೆ ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದಿನ ವ್ಯವಸ್ಥೆ ಇದೆ ಇದಕ್ಕೆ ಕಾರಣ ಸರಕಾರ ಧೋರಣೆ ರೈತಾಪಿ ವರ್ಗಗಳಿಗೆ ನೈಜ ಪ್ರೋತ್ಸಾಹ ಸಿಗಬೇಕು,ಕೃಷಿ ಭೂಮಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದು  ಸಭೆಯಲ್ಲಿ ಆಗ್ರಹಿಸಿದರಲ್ಲದೆ ಪಂಚವರ್ಣ ಸಂಸ್ಥೆ ಇಂತಹ ಕಾರ್ಯಕ್ರಮಗಳು ಮನಮುಟ್ಟುವಂತ್ತದ್ದು ಎಂದು ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಗುಂಡ್ಮಿ ತಗ್ಗಿನಬೈಲು ನಾರಾಯಣ ಪೂಜಾರಿಯವರಿಗೆ ರೈತ ಪುರಸ್ಕಾರ ನೀಡ ಗೌರವಿಸಲಾಯಿತು. ಪ್ರಾರಂಭದಲ್ಲಿ ಗೋ ಪೂಜೆ ನೆರವೆರಿಸಿದ ಕುಟುಂಬಿಕರು,ಗಿಡ ನೆಟ್ಟು ಪರಿಸರ ಜಾಗೃತಿ ಮೆರೆಯಲಾಯಿತು. ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ , ಪಟ್ಟಣಪಂಚಾಯತ್ ವಾರ್ಡ ಸದಸ್ಯ ರವೀಂದ್ರ ಕಾಮತ್, ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಜೆಸಿಐ ಸಿನಿಯರ್ ಲಿಜನ್ ಕೋಟ ಅಧ್ಯಕ್ಷ ಕೇಶವ ಆಚಾರ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ಸನ್ಮಾನಪತ್ರವಾಚಿಸಿದರು.ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು.ಮಾಜಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ. ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಸಾಲಿಗ್ರಾಮ ವಲಯ,ಜೆಸಿಐ ಸಿನಿಯರ್ ಲಿಜನ್ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ , ರೈತಧ್ವನಿ ಸಂಘ ಕೋಟ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 42 ನೇ ಸರಣಿ ಕಾರ್ಯಕ್ರಮದಲ್ಲಿ ಗುಂಡ್ಮಿ ತಗ್ಗಿನಬೈಲು ನಾರಾಯಣ ಪೂಜಾರಿಯವರಿಗೆ ರೈತ ಪುರಸ್ಕಾರ ನೀಡ ಗೌರವಿಸಲಾಯಿತು. ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕಾರ್ಕಡ ರಾಜು ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *