Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಮಾಜದ ಔದಾರ್ಯ ಸಂಸ್ಥೆಯ ಅಭಿವೃದ್ದಿಗೆ ಆಸರೆ – ಶ್ರೀ ಜಯಕರ ಶೆಟ್ಟಿ 

ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಮೂಲಕ ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ದಿನಕರ ಶೆಟ್ಟಿ ಇವರು ಕೊಡ ಮಾಡಿದ ಕುಡಿಯುವ ನೀರಿನ ಘಟಕ ಮತ್ತು ಗಣಕಯಂತ್ರಗಳ ಹಸ್ತಾಂತರ ಕಾರ್ಯಕ್ರಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿ ನಡೆಯಿತು. ಕೊಡುಗೆಗಳನ್ನು ಹಸ್ತಾಂತರಿಸಿದ ರೆಡ್ ಕ್ರಾಸ್ ಚೇರ್ಮನ್ ಶ್ರೀ ಜಯಕರ ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ನಡೆಸುವ ಮೂಲಕ ಜೀವನವನ್ನು ಹಸನಾಗಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಮತ್ತು ಶಿಷ್ಟತೆಯನ್ನು ತಿಳಿಯಬೇಕು. ಗ್ರಾಮೀಣ ಭಾಗದಲ್ಲಿರುವ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಸರ್ಕಾರಿ ಕಾಲೇಜು ಈ ಭಾಗದ ಉನ್ನತ ಶಿಕ್ಷಣ ಆಸಕ್ತರಿಗೆ ಆಶಾಕಿರಣವಾಗಿದೆ. ಇಲ್ಲಿನ ಬಡ ಮತ್ತು ಅವಕಾಶ ವಂಚಿತ ವಿದ್ಯಾರ್ಥಿಗಳ  ಭವಿಷ್ಯ ನಿರ್ಮಾಣದಲ್ಲಿ ದಾನಿಗಳ ಔದಾರ್ಯ ಮಹತ್ವದ ಪಾತ್ರ ವಹಿಸುತ್ತದೆ  ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಕೊಡುಗೆ ನೀಡಿದ ಡಾ. ದಿನಕರ್ ಶೆಟ್ಟಿ ಮತ್ತು ರೆಡ್ ಕ್ರಾಸ್ ಘಟಕಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಗಿರೀಶ್ ಶಾನುಭಾಗ್ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ವಸಂತ್ ಜಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *