
ಕೋಟ: ಶ್ರೀ ಕ್ಷೇತ್ರ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಧನುರ್ಮಾಸದ ಪ್ರಥಮ ಶನಿವಾರ ಪ್ರದೋಷ ಸಮಯದಲ್ಲಿ ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಅಂಗಸAಸ್ಥೆಯವರು ಪ್ರಾಯೋಜಿಸಿದ ಕುಂಜಾಲು ಗಿರಿಯ ಗಿರಿ ಬಳಗ ಇಲ್ಲಿನ ವಿಪ್ರ ತಂಡದವರ ತುಳಸೀ ಸಂಕೀರ್ತನೆಯನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಆಧ್ಯಾತ್ಮಿಕ, ಆದಿದೈವಿಕ ಮತ್ತು ಆದಿಬೌತಿಕ ದುರಿತಗಳಿಂದ ದೂರವಿರಲು ಆಬಾಲವೃದ್ಧರಿಗೆ ಭಜನೆ ಮತ್ತು ಸಂಕೀರ್ತನೆಗಳು ಬಹಳ ಸುಲಭ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆಯ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಕೂಮಜ ಸಾಲಿಗ್ರಾಮ ಅಂಗಸAಸ್ಥೆಯ ಮಾಜಿ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಹಾಗೂ ಎ. ಶ್ರೀಪತಿ ಅಧಿಕಾರಿ ,ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಐರೋಡಿ ಲಕ್ಷಿ÷್ಮನಾರಾಯಣ ತುಂಗ, ವ್ಯವಸ್ಥಾಪಕ , ನಾಗರಾಜ ಹಂದೆ, ಸಿಬ್ಬಂದಿ ಗಣೇಶ ಭಟ್ಚ,ಗಿರಿ ಬಳಗ ಕುಂಜಾಲುಗಿರಿಯ ಅಧ್ಯಕ್ಷ ನವೀನ್ ಕುಮಾರ್,ಕೂಮಜ ಇದರ ಅಮರ್ ಹಂದೆ, ಪಿ. ಪ್ರಕಾಶ ಹೇರ್ಳೆ, ಚಿದಾನಂದ ತುಂಗ, ಜಿ. ಜಗದೀಶ ಐತಾಳ,ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದ ಹೊಳ್ಳ , ವೈ. ಸದಾರಾಮ ಹೇರ್ಳೆ,ಉಪಾಧ್ಯಕ್ಷ ಕೃಷ್ಣ ಪ್ರಸಾದ್ ಹೇರ್ಳೆ ಉಪಸ್ಥಿತರಿದ್ದರು. ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ ಸ್ವಾಗತಿಸಿದರು. ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹೇರ್ಳೆ ಧನ್ಯವಾದಗೈದರು.
ಶ್ರೀ ಕ್ಷೇತ್ರ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಧನುರ್ಮಾಸದ ಪ್ರಥಮ ಶನಿವಾರ ಪ್ರದೋಷ ಸಮಯದಲ್ಲಿ ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಇಲ್ಲಿ ತುಳಸೀ ಸಂಕೀರ್ತನೆಯನ್ನು ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆಯ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಕೂಮಜ ಸಾಲಿಗ್ರಾಮ ಅಂಗಸAಸ್ಥೆಯ ಮಾಜಿ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಹಾಗೂ ಎ. ಶ್ರೀಪತಿ ಅಧಿಕಾರಿ ಮತ್ತಿತರರು ಇದ್ದರು.
Leave a Reply