
ಕೋಟ: ಇಲ್ಲಿನ ಕೋಟದ ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲ್ಲೆಯ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಹೊರಸುತ್ತಿನ ಆವರಣ ಇಂಟರ್ಲಾಕ್ ಅಳವಡಿಸುವ ಕುರಿತು ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಹಾಗೂ ದಾನಿಗಳ ಸಹಕಾರದೊಂದಿಗೆ ಗುರುವಾರ ಚಾಲನೆಗೊಂಡಿತು.
ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್, ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಇಂಟರ್ಲಾಕ್ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆಗೊಳಿಸಿದರು. ದೇಗುಲದ ಪ್ರಧಾನಅರ್ಚಕರಾದ ಸದಾಶಿವ ಅಡಿಗ,ರಾಜೇಂದ್ರ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು.
ದಾನಿಗಳಾದ ಮುಂಬೈ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ, ದ.ಕ ಮೀನುಗಾರಿಕಾ ಫೆಡರೇಶನ್ ನಿರ್ದೇಶಕ ದೇವಪ್ಪ ಕಾಂಚನ್, ಶಬರಿ ಕನ್ಟçಕ್ಷನ್ ಮಾಲಿಕ ಸುರೇಶ್ ಕಾಂಚನ್ ಬಾರಿಕೆರೆ, ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ, ಮಿತ್ರವೃಂದ ಪ್ರಮುಖರಾದ ಅಜಿತ್ ದೇವಾಡಿಗ, ರಾಜೇಶ್ ದೇವಾಡಿಗ, ಶಂಕರ್ ದೇವಾಡಿಗ, ಚಂದ್ರ ದೇವಾಡಿಗ, ರಕ್ಷತ್ ಆಚಾರ್ ಬೆಣ್ಣೆಕುದ್ರು ದೇಗುಲದ ಮ್ಯಾನೇಜರ್ ಸೋಮಶೇಖರ್ , ಕೋಟ ಸಿ.ಎ ಬ್ಯಾಂಕ್ ನಿರ್ದೇಶಕರಾದ ಮಹೇಶ್ ಶೆಟ್ಟಿ ಮಣೂರು, ಭಾಸ್ಕರ್ ಶೆಟ್ಟಿ ಮಣೂರು, ಕೋಟ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಸಮತಾ ಸುರೇಶ್, ಇಂಟರ್ಲಾಕ್ ಗುತ್ತಿಗೆದಾರ ರಮೇಶ್ , ಮತ್ತಿತರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋಟ ಪಂಚಾಯತ್ ಸದಸ್ಯ ಚಂದ್ರ ಆಚಾರ್ ನಿರೂಪಿಸಿದರು.
ಕೋಟದ ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲ್ಲೆಯ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಹೊರಸುತ್ತಿನ ಆವರಣದ ಕಾಮಗಾರಿಗೆ ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್, ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಭಟ್ ವಿದ್ಯುಕ್ತವಾಗಿ ಚಾಲನೆಗೊಳಿಸಿದರು.
Leave a Reply