Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮ
ಅಟಲ್ ಸಮಾಜದ ಆದರ್ಶ – ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕೋಟ: ಅಟಲ್ ಬಿಹಾರಿ ವಾಜಪೇಯಿ ಅವರು ಸಮಾಜಕ್ಕೆ ಮತ್ತು ರಾಜಕಾರಣಕ್ಕೆ ಆದರ್ಶ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟವರು. ಸಚ್ಚಾರಿತ್ರ÷್ಯ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನವಾಗಿ ಬಾಳಿ ಬದುಕಿದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನೋತ್ಸವ ಭಾರತದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಜಾಗೃತಿಯನ್ನು ಉಂಟುಮಾಡುತ್ತಿದೆ. ಅಟಲ್ ಜಿ ಅವರ ಕಾಲದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊoಡಿದ್ದು, ಮೋದಿಜಿ ಅವರ ಕಾಲದಲ್ಲೂ ಮುಂದುವರೆಯುತ್ತಿದೆ. ನನಗಿಂತ ನನ್ನ ಜಾತಿ, ಧರ್ಮಕ್ಕಿಂತ, ನನ್ನ ದೇಶ ಮೊದಲು ಎನ್ನುವ ಹೃದಯಗಳಿಗೆ ಶಕ್ತಿ ನೀಡಿದ್ದೆ ಅಟಲ್‌ಜಿ ಎಂದು ಭಾರತೀಯ ಜನತಾ ಪಾರ್ಟಿ ಕೋಟ ಮತ್ತು ಕೋಟತಟ್ಟು ಶಕ್ತಿ ಕೇಂದ್ರ ವತಿಯಿಂದ ಕೋಟ ಮಾಗಲ್ಯ ಮಂದಿರದಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು ಹೇಳಿದರು.

ಸಭೆಯಲ್ಲಿ ಶಾಸಕರಾದ  ಕಿರಣ್ ಕುಮಾರ್ ಕೊಡ್ಗಿ, ಚಿಂತಕ ಹಾಗೂ ಲೇಖಕ  ಪ್ರಕಾಶ್ ಮಲ್ಪೆ, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಪ್ರದಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ,  ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ  ಸತೀಶ್ ಕುಂದರ್ ಬಾರಿಕೆರೆ, ವಡ್ದರ್ಸೆ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್, ಹಿರಿಯರಾದ ಸುರೇಂದ್ರ ಹೆಗ್ಡೆ, ಕೋಟತಟ್ಟು ಶಕ್ತಿ ಕೇಂದ್ರ ಅಧ್ಯಕ್ಷ ಪ್ರಮೋದ್ ಹಂದೆ, ಕೋಟ ಶಕ್ತಿ ಕೇಂದ್ರ ಅಧ್ಯಕ್ಷ ಅಜಿತ್ ದೇವಾಡಿಗ, ಇನ್ನಿತರ ಜಿಲ್ಲಾ ಹಾಗೂ ಕ್ಷೇತ್ರ ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಭಾರತೀಯ ಜನತಾ ಪಾರ್ಟಿ ಕೋಟ ಮತ್ತು ಕೋಟತಟ್ಟು ಶಕ್ತಿ ಕೇಂದ್ರ ವತಿಯಿಂದ ಕೋಟ ಮಾಗಲ್ಯ ಮಂದಿರದಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದರು. ಶಾಸಕರಾದ  ಕಿರಣ್ ಕುಮಾರ್ ಕೊಡ್ಗಿ, ಚಿಂತಕ ಹಾಗೂ ಲೇಖಕ  ಪ್ರಕಾಶ್ ಮಲ್ಪೆ, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಪ್ರದಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *