Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸೇರಿದಂತೆ ವಿವಿಧ ಭಾಗಗಳಲ್ಲಿ ಅಗಲಿದ ವೀರ ಯೋಧ ದೇಶಭಕ್ತ ಅನೂಪ್ ಪೂಜಾರಿಗೆ ಕೋಟದೂರಿನಲ್ಲಿ ವೀರ ನಮನ

ಕೋಟ: ದೇಶ ಕಾಯುವ ಕಾಯಕಜೀವಿ ವೀರಯೋಧ ಅನೂಪ್ ಪೂಜಾರಿ ಗಡಿಕಾಯುವ ಸಂದರ್ಭ ರಸ್ತೆ ಅಪಘಾತವೊಂದರಲ್ಲಿ ಸೇನಾ ಟ್ರಕ್ ಪಲ್ಟಿಯಾಗಿ ಸಾವನ್ನಪ್ಪಿದ್ದು ಈ ಹಿನ್ನಲ್ಲೆಯಲ್ಲಿ ಹುಟ್ಟೂರು ಉಡುಪಿ ಜಿಲ್ಲೆಯ ಬೀಜಾಡಿ ಆಗಮಿಸುವ ಸಂದರ್ಭದ ಮಾರ್ಗದಲ್ಲಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರು ಅವರ ಮೃತದೇಹಕ್ಕೆ ಪುಷ್ಭನಮನ ಸಲ್ಲಿಸಿದರು.

ಕೋಟ ಅಮೃತೇಶ್ವರಿ ದೇಗುಲದ ಸನಿಹದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸುತ್ತಿದ್ದಂತೆ ಭಾರತ್ ಮಾತಾಕೀ ಜೈ ವೀರಯೋಧನಿಗೆ ಜೈಕಾರ ಘೋಷಣೆಗಳು ಬಾನಂಗಳನ್ನು ಕ್ರಮಿಸಿಕೊಂಡಿತು.ಸಾಸ್ತಾನದ ಮಾಬುಕಳ,ಬಸ್ ನಿಲ್ದಾಣ ಸಾಸ್ತಾನ,ಸಾಲಿಗ್ರಾಮ,ಕೋಟ ಹೈಸ್ಕೂಲ್ ಸರ್ಕಲ್,ತೆಕ್ಕಟ್ಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ವಿವಿಧ ಬಗೆಯ ಪುಷ್ಭಗಳು ಮೃತದೇಹವಿದ್ದ ವಾಹನಕ್ಕೆ ಸಿಂಚನಗೈದು, ಸೆಲ್ಯೂಟ್ ನೀಡಿ ಗೌರವ ಸಲಿಸಿದರು.

ಸಂಸದ  ಶಾಸಕ ಭಾಗಿ ಕೋಟ ಸರ್ಕಲ್ ಬಳಿ ಪೂರ್ವಾಹ್ನದಿಂದಲೇ ಬಾರಿ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಸೇರಿದ್ದರು ಈ ನಡುವೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳದ ಶಾಸಕ ಸುನೀಲ್ ಕುಮಾರ್, ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ರಾಘವೇಂದ್ರ ಕಾಂಚನ್, ಕೋಟತಟ್ಟು ಗ್ರಾಮಪಂಚಾಯತ್ ಸತೀಶ್ ಕುಂದರ್, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ ಸ್ಥಳೀಯಾಡಳಿತ ಪ್ರತಿನಿಧಿಗಳು, ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ ಕುಂದರ್, ಬಿಜೆಪಿ ಹಾಗೂ ಕಾಂಗ್ರೆಸ್ ಮುಂಡರುಗಳು, ಸಮಾಜಸೇವಕರು,ವಿವಿಧ ಸಮುದಾಯಗಳ ಮುಖಂಡರುಗಳು ಭಾಗಿಯಾಗಿ ನಮನ ಸಲ್ಲಿಸಿದರು.

ಹುಟ್ಟೂರು ಉಡುಪಿ ಜಿಲ್ಲೆಯ ಬೀಜಾಡಿ ಆಗಮಿಸುವ ಸಂದರ್ಭದ ಮಾರ್ಗದಲ್ಲಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರು ಅವರ ಮೃತದೇಹಕ್ಕೆ ಪುಷ್ಭನಮನ ಸಲ್ಲಿಸಿದರು. ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಕಾರ್ಕಳದ ಶಾಸಕ ಸುನೀಲ್ ಕುಮಾರ್ ಭಾಗಿಯಾದರು.

Leave a Reply

Your email address will not be published. Required fields are marked *