Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿನ್ ಲೈಟ್ ಸ್ಪೋಟ್ಸ್೯ ಕ್ಲಬ್ ಸಾಮಾಜಿಕ ಕಾರ್ಯ ಶ್ಲಾಘನೀಯ ‌- ಡಾ.ಕೃಷ್ಣ ಕಾಂಚನ್
ಅಶಕ್ತರಿಗೆ ಸಹಾಯ,ಸಾಧಕರಿಗೆ ಸನ್ಮಾನ

ಕೋಟ: ಇಲ್ಲಿನ ಪಾರಂಪಳ್ಳಿ ಪಡುಕರೆಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಪ್ರತಿವರ್ಷ ನಡೆಸಲ್ಪಡುವ  ಅಶಕ್ತರಿಗಾಗಿ ನಮ್ಮ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಡಿ ಪೇರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ,ಅಶಕ್ತರಿಗೆ ನೆರವು ಕಾರ್ಯಕ್ರಮ ಶನಿವಾರ ಪಾರಂಪಳ್ಳಿ ಪಡುಕರೆಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಸಂಘಸಂಸ್ಥೆಗಳ ಸಾಮಾಜಿಕ ಕಾರ್ಯಕ್ರಮ ಶ್ಲಾಘನೀಯ ಅಲ್ಲದೆ ಅಶಕ್ತರಿಗಾಗಿ ನೆರವು ಕಾರ್ಯಕ್ರಮ ವಿಶೇಷವಾದದ್ದು ವಿನ್ ಲೈಟ್ ಸಾಮಾಜಮುಖಿ  ಕಾರ್ಯಕ್ರಮ ಜನಮನ್ನಣೆಗಳಿದೆ ಎಂದರು.  ಯಕ್ಷಗಾನ ಕಾರ್ಯಕ್ರಮದ ಒಗ್ಗೂಡಿಸಿ ಮಿಗತೆ ಹಣವನ್ನು ಸ್ಥಳೀಯ ಅನಾರೋಗ್ಯ ಪೀಡಿತರಿಗೆ ಸುಮಾರು ಒಂದು ಲಕ್ಷ ರೂ ಹಣವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಧಕರಾದ ಸಮಾಜಸೇವಕರಾದ ಮಂಜುನಾಥ ಉಪಾಧ್ಯಾ,ಮಹಮ್ಮದ್ ಆಸಿಫ್, ಜಾನಪದ ವಿಭಾಗದ ಗುಂಡು ಪೂಜಾರಿ,ಅಗ್ನಿಶಾಮಕ ದಳದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ನಾಗೇಶ್ ಪೂಜಾರಿ,ಇಂಜಿನಿಯರಿಂಗ್ ರ್ಯಾಂಕ್ ವಿದ್ಯಾರ್ಥಿ ಶ್ರೀರಾಜ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ  ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ಗೀತಾ ಶಂಭು ಪೂಜಾರಿ,  ರಾಜೇಶ್ ಉಪಾಧ್ಯಾಯ,ಪೇರ್ಡೂರು ಮೇಳದ ಮ್ಯಾನೇಜರ್ ಸುಬ್ರಹ್ಮಣ್ಯ ಶೆಟ್ಟಿ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಪೋರ್ಟ್ಸ್ ಕ್ಲಬ್ ನ ದೇವೇಂದ್ರ ಶ್ರೀಯಾನ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *