Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ: ಡ್ರಗ್ಸ್ ಮಾರಾಟ ಯತ್ನ : ನಾಲ್ವರು ಪೊಲೀಸ್ ವಶಕ್ಕೆ…!!

ಉಡುಪಿ: ನಗರದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ.28ರಂದು ಮಧ್ಯಾಹ್ನ ವೇಳೆ ಕಾರ್ಕಳ ನೀರೆ ಸಮೀಪ  ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರೇಮನಾಥ ಯಾನೆ ಪ್ರೇಮ್, ರೇವುನಾಥ, ಶೈಲೇಶ, ಪ್ರಜ್ವಲ್ ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಾರ್ಕಳ ನೀರೆ ಸಮೀಪ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರಿಂದ 2 ಲಕ್ಷ ರೂ. ಮೌಲ್ಯದ 37.27ಗ್ರಾಂ ತೂಕದ ಎಂಡಿಎಂಎ, 87,500ರೂ. ಮೌಲ್ಯದ 1.112 ಕಿ.ಲೋ. ತೂಕದ ಗಾಂಜಾ, 41ಸಾವಿರ ರೂ. ಮೌಲ್ಯದ ಐದು ಮೊಬೈಲ್, ಎರಡು ಬ್ಯಾಗ್, ಚೂರಿ, ಕೈಕೊಡಲಿ, 7130 ರೂ. ನಗದು, ಕಾರು ಮತ್ತು ಬೈಕ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 7,86,330ರೂ. ಎಂದು ಅಂದಾಜಿಸಲಾಗಿದೆ.

ಇವರಲ್ಲಿ ಪ್ರೇಮ್ ಎಂಡಿಎಂಎ ಫೌಡರನ್ನು ಬೆಂಗಳೂರು ನಿವಾಸಿ ದಾವೂದ್ ಎಂಬಾತನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply

Your email address will not be published. Required fields are marked *