
ಉಡುಪಿ: ನಗರದಲ್ಲಿ ಸಿಗರೇಟು , ಗುಟ್ಕಾ ಮಾರಾಟ ಮಾಡಲಿಕ್ಕೆ ನಿಷೇಧವಿದೆ ಎಂದು ನಗರಸಭೆಯ ಅಧಿಕಾರಿಗಳು ಅಂಗಡಿ ಮಾಲೀಕರು ಗಳಿಗೆ ಫೈನ್ ಹಾಕುವುದೇನು? ಸಿಗರೇಟು ಮಾರುತ್ತಾರೆ ಎಂದು ನೋಟಿಸು ಕೊಡುವುದೇ ನು? ಅಂಗಡಿ ಲೈಸೆನ್ಸ್ ರದ್ದು ಮಾಡುವುದೇನು? ಅಬ್ಬಬ್ಬಾ, ಭೇಷ್,ವಂಡರ್ ಫುಲ್, ಗ್ರೇಟ್.ಅಧಿಕಾರಿಗಳೆಂದರೆ ಹೀಗಿರಬೇಕು ಅಲ್ವಾ.
ಹೌದು, ಅಧಿಕಾರಿಗಳು ಅಂದರೆ ಹೀಗೇ ಇರಬೇಕು. ಆದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವವರನ್ನು ಮಾತ್ರ ತಥ್ ತೇರಿ ಅಜ್ಜಿ ಎಂಬ ಭಾಷೆಯಲ್ಲಿ ಬಯ್ಯುವ ಎಂದು ಎಲ್ಲರಿಗೂ ಎಣಿಸಿದರೆ ತಪ್ಪಲ್ಲ!
ಯಾಕೆ ಅಂತೀರಾ? ಈ ಉಡುಪಿ ನಗರಸಭೆಯ ಅಧಿಕಾರಿಗಳು ಮಾಡುವ ಎಡವಟ್ಟುಗಳು ಇಂತದ್ದೇ!
ಹಲವಾರು ಸಾವಿರ ಬಾಡಿಗೆ ಕಟ್ಟಿ ವ್ಯಾಪಾರ ಇಲ್ಲದೆ ಸಾಲ ಮಾಡಿ,ಏನೋ ಜೀವನ ಸಾಗಿಸುವ ಅಂಗಡಿ ಮಾಲೀಕರಿಗೆ ಫೈನ್ ಹಾಕಿ, ನೋಟೀಸ್ ಕೊಟ್ಟು, ಲೈಸೆನ್ಸ್ ರದ್ದು ಮಾಡಿ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸುವ ನಗರಸಭೆಯ ಅಧಿಕಾರಿಗಳು ನಯಾಪೈಸೆ ಬಾಡಿಗೆ ನಗರಸಭೆಗೆ ಕಟ್ಟದೆ ಅನಧಿಕೃತವಾಗಿ ಗೂಡಂಗಡಿಗಳನ್ನು ಇಟ್ಟುಕೊಂಡು ಅದಕ್ಕೊಂದಿಷ್ಟು ಅಡ್ಡವಾಗಿ ಟರ್ಪಾಲುಕಟ್ಟಿ ಸಿಗರೇಟು ಸೇದಲು ಅವಕಾಶ ಮಾಡಿ ಕೊಡುವ ಅದೆಷ್ಟು ಗೂಡಂಗಡಿ ಗಳು ನಮ್ಮ ಕಣ್ಣ ಮುಂದಿವೆ.ಆದರೆ ಈ ಅನಧಿಕೃತ ಗೂಡಂಗಡಿಗಳು ಅಧಿಕಾರಿಗಳ ಕಣ್ಣಿಗೆ ಕಾಣುವುದೇ ಇಲ್ಲ.
ಅದೆಲ್ಲಾ ಅಂಗಡಿಗಳ ಬಗ್ಗೆ ಸಾರ್ವಜನಿಕ ದೂರಿನ ಬಗ್ಗೆ ಮುಂದೆ ಮಾತನಾಡೋಣ.
ಇಲ್ಲೊಬ್ಬ ಪಾನ್ ಅಂಗಡಿಯವ ಬಹಿರಂಗವಾಗಿ ನಗರದ ಹ್ರದಯಭಾಗದಲ್ಲಿ ಗುಟ್ಕಾ ಗಳನ್ನು ಬಹಿರಂಗವಾಗಿ ನೇತು ಹಾಕಿ, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಲು ನೀಡಿ ವ್ಯಾಪಾರ ಮಾಡುತ್ತಿದ್ದಾನೆ. ಅದೂ ಶಾಲಾ ಮಕ್ಕಳಿಗೆ ಗುಟ್ಕಾ, ಸಿಗರೇಟು ಸೇವಿಸಲು ಬಹಿರಂಗವಾಗಿ ನೀಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿ ಕೊಂಡಿದ್ದಾರೆ.
ನಗರದ ಹಳೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಜನಾರ್ಧನ ಹೋಟೆಲ್ ಗೆ ತೆರಳುವ ಜಂಕ್ಷನ್ ನಲ್ಲೇ ಈ ಅನಧಿಕೃತ ಪಾನ್ ಡಬ್ಬ ವಾಲಾ ಬಹಿರಂಗವಾಗಿ ಗುಟ್ಕಾ, ಸಿಗರೇಟು ವ್ಯಾಪಾರ ಮಾಡುತ್ತಿದ್ದಾನೆ.
ಈ ಪಾನ್ ವಾಲಾನಿಗೆ ನೀಡಿರುವ ವಿಶೇಷ ಪರವಾನಿಗೆ ಬೇರೆಯವರಿಗೂ ನೀಡಲು ಸಾಧ್ಯವೇ? ಇಲ್ಲವೆಂದಾದರೆ ಈ ಪಾನ್ ಡಬ್ಬವನ್ನು ನಗರಸಭೆಯ ಲಾರಿಯಲ್ಲಿ ತುಂಬಿಸುವ ಧಮ್ ಅಧಿಕಾರಿಗಳಿಗೆಇದೆಯೇ? ಕಾದು ನೋಡೋಣ.
Leave a Reply