Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಹಿಂದೂ ಜಾಗರಣಾ ವೇದಿಕೆಯಿಂದ ಯೋಧ ಅನೂಪ್ ಪೂಜಾರಿಗೆ ಅಶ್ರುತರ್ಪಣ

ಕೋಟ: ಇಲ್ಲಿನ ಕೋಟದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾಶ್ಮೀರದಲ್ಲಿ ಅವಡಗಡದಲ್ಲಿ ಪ್ರಾಣ ತೆಜಿಸಿದ ವೀರ ಐಓಧ ಅನೂಪ್ ಪೂಜಾರಿಯವರ ಶ್ರದ್ಧಾಂಜಲಿ ಬ್ಯಾನರ್ ಅವಳಡಿಸಿ ಅಶ್ರುತರ್ಪಣ ಕಾರ್ಯಕ್ರಮ ಏರ್ಪಡಿಸಲಾಯಿತು.

ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಟ ಅನಂತಕೃಷ್ಣ ಕಾಮತ್ ಮಡಿದ ವೀರ ಯೋಧ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಪುಷ್ಭ ನಮನಗೈದು ಗಡಿಯಲ್ಲಿ ದೇಶ ಕಾಯಯವ ಕಾಯಕ ಶ್ರೇಷ್ಠವಾದದ್ದು ಸೈನ್ಯ ವೃತ್ತಿಯ ಮೂಲಕ ತಮ್ಮನ್ನು ತಾವು ಸರ್ಪಸಿಕೊಂಡAತೆ ಈ ದಿಸೆಯಲ್ಲಿ ಅನೂಪ್ ಪೂಜಾರಿ ಆಘಾತಭರಿತ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿದೆ.ಇಂತಹ ದೇಶಭಕ್ತರ ಬಲಿದಾನ ರಾಷ್ಟç ಪ್ರೇಮವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.

ಅನೂಪ್ ಪೂಜಾರಿಯವರ ಸಹಪಾಟಿ  ಸೇನೆಯ ಹಿರಿಯ ಅಧಿಕಾರಿ ಸುಬೇದಾರ್ ಶಂಕರ ಗೌಡ ಪಾಟೀಲ್ ಅನೂಪ್ ಪೂಜಾರಿಯವರ ದೇಶ ಸೇವೆಯ ದಿನಗಳನ್ನು ಸಭೆಯಲ್ಲಿ ತೆರೆದಿಟ್ಟರು. ಈ ವೇಳೆ ನಿವೃತ್ತ ಯೋಧರಾದ  ರವಿಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್ ಪಡುಕರೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನೂಪ್ ಪೂಜಾರಿಯವರಿಗೆ ನಮನಗಳನ್ನು ಸಲ್ಲಿಸಿದರು.

ಕೋಟ ಹಿ.ಜಾವೇ ಅಧ್ಯಕ್ಷ ಪವನ್ ಕುಂದರ್,ಕಾರ್ಯದರ್ಶಿ ಕೀರ್ತಶ್ ಪೂಜಾರಿ, ಗೌರವಾಧ್ಯಕ್ಷ ಆನಂದ್ ದೇವಾಡಿಗ, ಮುಖಂಡರುಗಳಾದ ಶಂಕರ್ ಕೋಟ, ಸಮತಾ ಸುರೇಶ್ , ನಾಗೇಶ್ ಪೂಜಾರಿ, ರತ್ನಾಕರ್ ಪೂಜಾರಿ,ರಾಘವೇಂದ್ರ ಕಾಂಚನ್, ಸತೀಶ್ ಬಾರಿಕೆರೆ , ಜಾಗರಣಾ ವೇದಿಕೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಪ್ರಮುಖರಾದ ರಂಜೀತ್ ಕುಮಾರ್ ನಿರ್ವಹಿಸಿದರು.

ಇಲ್ಲಿನ ಕೋಟದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾಶ್ಮೀರದಲ್ಲಿ ಅವಡಗಡದಲ್ಲಿ ಪ್ರಾಣ ತೆಜಿಸಿದ ವೀರ ಐಓಧ ಅನೂಪ್ ಪೂಜಾರಿಯವರ ಶ್ರದ್ಧಾಂಜಲಿ ಬ್ಯಾನರ್ ಅವಳಡಿಸಿ ಅಶ್ರುತರ್ಪಣ ಕಾರ್ಯಕ್ರಮ ಏರ್ಪಡಿಸಲಾಯಿತು. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಟ ಅನಂತಕೃಷ್ಣ ಕಾಮತ್, ನಿವೃತ್ತ ಯೋಧರಾದ  ರವಿಚಂದ್ರ ಶೆಟ್ಟಿ,ಯೋಗೀಶ್ ಕಾಂಚನ್ ಪಡುಕರೆ, ಸೇನೆಯ ಹಿರಿಯ ಅಧಿಕಾರಿ ಸುಬೇದಾರ್ ಶಂಕರ ಗೌಡ ಪಾಟೀಲ್, ಕೋಟ ಹಿ.ಜಾವೇ ಅಧ್ಯಕ್ಷ ಪವನ್ ಕುಂದರ್, ಕಾರ್ಯದರ್ಶಿ ಕೀರ್ತಶ್ ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *