Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಅಗಲಿದ ಮಹನೀಯರಿಗೆ ನುಡಿ ನಮನ ಕಾರ್ಯಕ್ರಮ

ಕೋಟ : ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಇತ್ತೀಚಿಗೆ ಅಗಲಿದ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿ ಅಪಘಾತದಲ್ಲಿ ಹುತಾತ್ಮರಾದ ಯೋಧ  ಅನೂಪ್ ಪೂಜಾರಿ,ಹಾಗೂ  ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ,ಅಧ್ಯಕ್ಷರಾಗಿ  ಸೇವೆ ಸಲ್ಲಿಸಿ ಅಗಲಿದ ಜಿ. ರಾಮಕೃಷ್ಣ ಐತಾಳ ಇವರಿಗೆ ಸಂಘದ ವತಿಯಿಂದ ನುಡಿ ನಮ£ನ ಕಾರ್ಯಕ್ರಮವು  ಶುಕ್ರವಾರ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.

ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಎಸ್. ಕಾರಂತ, ಭೂ ಅಭಿವೃದ್ಧಿ ಬ್ಯಾಂಕ್, ಉಡುಪಿ ಇದರ ಉಪಾಧ್ಯಕ್ಷ ಶಿವರಾಮ ಉಡುಪ, ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ. ರಾಮಚಂದ್ರ ಐತಾಳ, ಸರಕಾರಿ ಪದವಿಪೂರ್ವ ಕಾಲೇಜು, ತೆಕ್ಕಟ್ಟೆ ಇದರ ನಿವೃತ್ತ ಪ್ರಾಂಶುಪಾಲರಾದ ಜಿ. ಶಿವಾನಂದ ಮಯ್ಯ, ಸಂಘದ ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್, ನಿರ್ದೇಶಕರಾದ  ಜಿ. ತಿಮ್ಮ ಪೂಜಾರಿ, ಕೆ. ಉದಯಕುಮಾರ ಶೆಟ್ಟಿ,  ರವೀಂದ್ರ ಕಾಮತ್,  ಮಹೇಶ ಶೆಟ್ಟಿ,  ರಾಜೇಶ ಉಪಾಧ್ಯ,  ಗೀತಾ ಶಂಭು ಪೂಜಾರಿ,  ಎಚ್. ನಾಗರಾಜ ಹಂದೆ, ಪ್ರೇಮಾ ಎಸ್. ಪೂಜಾರಿ, ರಂಜಿತ್ ಕುಮಾರ್,  ರಶ್ಮಿತಾ, ಭಾಸ್ಕರ ಶೆಟ್ಟಿ,  ಕೆ. ಶ್ರೀಕಾಂತ ಶೆಣೈ,  ಅಚ್ಯುತ ಪೂಜಾರಿ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮೃತರ ಭಾವಚಿತ್ರಗಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಸಲಹಾ ಸಮಿತಿ ಸದಸ್ಯರು, ನಿವೃತ್ತ ಸಿಬ್ಬಂದಿಯವರು ಮತ್ತು ಹಾಲಿ ಸಿಬ್ಬಂದಿಯವರು ಪುಷ್ಪನಮನ ಗೈದರು. ಮೃತರ ಗೌರವಾರ್ಥ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಸಂಘದ ಸಲಹಾ ಸಮಿತಿ ಸದಸ್ಯರು, ನಿವೃತ್ತ ಮತ್ತು ಹಾಲಿ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಟಿ. ಮಂಜುನಾಥ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತಕುಮಾರ್ ಶೆಟ್ಟಿ ಇವರು ಧನ್ಯವಾದ ಸಮರ್ಪಿಸಿದರು. ಸಂಘದ ಸಿಬ್ಬಂದಿ  ಮಂಜುನಾಥ ಇವರು ಕಾರ್ಯಕ್ರಮ ನಿರೂಪಿಸಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಇತ್ತೀಚಿಗೆ ಅಗಲಿದ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿ ಅಪಘಾತದಲ್ಲಿ ಹುತಾತ್ಮರಾದ ಯೋಧ  ಅನೂಪ್ ಪೂಜಾರಿ,ಹಾಗೂ  ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ,ಅಧ್ಯಕ್ಷರಾಗಿ  ಸೇವೆ ಸಲ್ಲಿಸಿ ಅಗಲಿದ ಜಿ. ರಾಮಕೃಷ್ಣ ಐತಾಳ ಇವರಿಗೆ ಸಂಘದ ವತಿಯಿಂದ ನುಡಿ ನಮ£ನ ಕಾರ್ಯಕ್ರಮವು  ಶುಕ್ರವಾರ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.

Leave a Reply

Your email address will not be published. Required fields are marked *