Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಬಲಪಾಡಿ ಗ್ರಾಮ ಪಂಚಾಯತ್ ನ ಉಜ್ವಲ ಸಂಜೀವಿನಿ ಒಕ್ಕೂಟ ಸದಸ್ಯರ “ಹಡಿಲು ಭೂಮಿ ಕೃಷಿ-2023 ನ ಸಾವಯವ ಕಜೆ ಅಕ್ಕಿ” ಮಾರುಕಟ್ಟೆಗೆ ಬಿಡುಗಡೆ

ಅಂಬಲಪಾಡಿ ಗ್ರಾಮ ಪಂಚಾಯತ್ ನ ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು ಈ ಭಾರಿ ಹಡಿಲು ಭೂಮಿ ಕೃಷಿಯನ್ನು ಪ್ರೋತ್ಸಾಹಿಸುವ ಪ್ರಥಮ ಪ್ರಯತ್ನವಾಗಿ ಬಂಕೇರಕಟ್ಟ ಆಚಾರಿಗುಂಡಿ ವ್ಯಾಪ್ತಿಯಲ್ಲಿ ಸುಮಾರು ಸ್ವತಃ 3.5 ಎಕರೆ ಹಡಿಲು ಭೂಮಿ ಕೃಷಿ ಮತ್ತು ಪರಿಸರದ ಯುವಕರು ಭೂಮಾಲಕರಿಗೆ ಸಹಕಾರ ನೀಡಿ ಸುಮಾರು 7 ಎಕರೆ ಹಡಿಲು ಭೂಮಿ ಕೃಷಿ ಮಾಡಲಾಗಿದೆ.

ಸಂಜೀವಿನಿ ಒಕ್ಕೂಟದ ಸದಸ್ಯರ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ & ಉಡುಪಿಯ ಯುವ ಶಾಸಕರಾದ ಯಶ್ಪಾಲ್ ಸುವರ್ಣ & ಉಡುಪಿ ವಿಧಾನ ಸಭಾ ಕ್ಷೇತ್ರದ ಹಡಿಲು ಭೂಮಿ ಕೃಷಿ ಕ್ರಾಂತಿಯನ್ನೇ ಮಾಡಿದ ಮಾಜಿ ಶಾಸಕರಾದ ರಘುಪತಿ ಭಟ್ & ಕೃಷಿ ಇಲಾಖಾ ಅಧಿಕಾರಿಗಳಿಂದ ಅವರಿಂದಲೂ ಪ್ರಶಂಸೆಗೆ ಪಾತ್ರವಾಗಿತ್ತು.

ದಿನಾಂಕ 21/12/2023 ಗುರುವಾರ ಗಣ್ಯರು, ಕೃಷಿ ಇಲಾಖಾ ಅಧಿಕಾರಿಗಳು & ಸಂಜೀವಿನಿ ಸದಸ್ಯರ ಉಪಸ್ಥಿತಿಯಲ್ಲಿ ಸದಸ್ಯರು ತಾವು ಬೆಳೆದ ಸಂಪೂರ್ಣ ಸಾವಯವ ಕೃಷಿಯ ಕಜೆ ಕುಚ್ಛಲಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಸಂಜೀವಿನಿ ಸದಸ್ಯರ ಈ ಹಡಿಲು ಭೂಮಿ ಕೃಷಿ ಆಂದೋಲನದ ಯಶಸ್ಸಿನಲ್ಲಿ ಸದಸ್ಯರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಸಹಕಾರ ನೀಡಿದ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಇಂದಿನ ಈ ಸಮಾರಂಭದಲ್ಲಿ ಕೃಷಿ ಇಲಾಖಾ ಅಧಿಕಾರಿ ಮೋಹನ್ ರಾಜ್ ಸರ್, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಯೋಗೀಶ್ ಶೆಟ್ಟಿ ಉಪಾಧ್ಯಕ್ಷರಾದ ಸುಜಾತಾ ಸುಧಾಕರ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಜಿಲ್ಲಾ/ತಾಲೂಕು ಸಂಪನ್ಮೂಲ ವ್ಯಕ್ತಿ ತಾರಾ, ಸಖಿ ಒನ್ ಸ್ಟಾಪ್ ಸೆಂಟರ್ ನ ಸಲಹೆಗಾರರಾದ ಏಂಜಲಿನಾ, ಕೃಷಿ ಇಲಾಖಾ ಜಿಲ್ಲಾ ಪಂಚಾಯತ್ & ತಾಲೂಕು ಪಂಚಾಯತ್ ವ್ವವಸ್ಥಾಪಕರಾದ ಸೌಮ್ಯ & ಅಶ್ವಿನಿ‌ & GENDER POINT ಅಧ್ಯಕ್ಷರಾದ ಮೋಹಿನಿ ಭಾಸ್ಕರ್, ಕೃಷಿ ಸಖಿ ಸವಿತಾ ಸಂತೋಷ್,‌ಕೃಷಿ ಉಧ್ಯೋಗ ಸಖಿ ವಾಣಿಶ್ರೀ ಅರುಣ್, MBK ಪ್ರಮೀಳಾ ಶಶಿಕಾಂತ್,‌ LCRP ಶಮಿತಾ ಅಮರನಾಥ್ & ಇಂದಿರಾ ಪಾಂಡುರಂಗ, ಪಶು ಸಖಿ ಸುಪ್ರೀತ ಮನೋಜ್, BRP EP ಪ್ರಮೀಳಾ ಸುಧಾಕರ್, ಲತಾ ಆನಂದ ಪೂಜಾರಿ, ಉಷಾ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *