
ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಇದರ ದಶಮಾನೋತ್ಸವದ ಅಂಗವಾಗಿ ಇದೇ ಬರುವ 28ರಿಂದ 30ರ ವರೆಗೆ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆಯನ್ನು ಕೋಟ ಮಾಂಗಲ್ಯ ಮಂದಿರದಲ್ಲಿ ಇತ್ತೀಚಿಗೆ ನಡೆಸಲಾಯಿತು.
ಕೋಟಿ ಗಾಯತ್ರೀ ಮಹಾಯಾಗದ ಅಧ್ಯಕ್ಷ ವಿದ್ವಾನ್ ಡಾ| ವಿಜಯ ಮಂಜರ್ ರವರು ಮಹಾಯಾಗದ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯದರ್ಶಿ ಪ್ರಸನ್ನ ಭಟ್ ಮಹಾಯಾಗದ ಬೇರೆ ಬೇರೆ ಸಮಿತಿಗಳ ಜವಾಬ್ದಾರಿಯನ್ನು ತಿಳಿಸಿದರು. ವೇದಿಕೆಯಲ್ಲಿ ಜ್ಯೋತಿಷಿ ಸಾಲಿಗ್ರಾಮ ಶ್ರೀನಿವಾಸ ಅಡಿಗ , ಕೋಟ ಗಣೇಶ ಭಟ್ , ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಉಪಸ್ಥಿತರಿದ್ದರು. ರಾಮಚಂದ್ರ ಉಡುಪ ಸ್ವಾಗತಿಸಿದರು. ಯಾಗ ಸಮಿತಿಯ ಗೌರವ ಸಲಹೆಗಾರರು ಹಾಗೂ ನಿಯೋಜಿತ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಯನ್ನು ನೀಡಿದರು.
ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆ ಕೋಟ ಮಾಂಗಲ್ಯ ಮಂದಿರದಲ್ಲಿ ಜರಗಿತು. ಮಹಾಯಾಗದ ಅಧ್ಯಕ್ಷ ವಿದ್ವಾನ್ ಡಾ| ವಿಜಯ ಮಂಜರ್, ಜ್ಯೋತಿಷಿ ಸಾಲಿಗ್ರಾಮ ಶ್ರೀನಿವಾಸ ಅಡಿಗ , ಕೋಟ ಗಣೇಶ ಭಟ್ ಮತ್ತಿತರರು ಇದ್ದರು.
Leave a Reply