
ಕೋಟ: ಕರ್ಣಾಟಕ ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಜನಸ್ನೇಹಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮತ್ಸೊ÷್ಯÃದ್ಯಮಿ ಆನಂದ್ ಸಿ ಕುಂದರ್ ಹೇಳಿದರು.
ಕೋಟ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭಗೊAಡು 57ನೇ ವರ್ಷದ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ ಕರ್ಣಾಟಕ ಬ್ಯಾಂಕ್ ದೇಶದಾದ್ಯಂತ ತನ್ನ ವ್ಯವಹಾರವನ್ನು ಕುದರಿಸಿಕೊಂಡಿದೆ. ತನ್ನ ಸಿಎಸ್‌ಆರ್ ಫಂಡ್ ಮೂಲಕ ಕರಾವಳಿ ಭಾಗದ ಶೈಕ್ಷಣಿಕ,ಧಾರ್ಮಿಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸಿದೆ.
ಇತ್ತೀಚಿಗಿನ ವರ್ಷಗಳಲ್ಲಿ ಆರ್ಥಿಕ ವಹಿವಾಟು ವೃದ್ಧಿಸಿಕೊಂಡು ಪ್ರತಿಮನೆಗಳ ಮನಗೆದ್ದ ಬ್ಯಾಂಕ್ ಆಗಿದೆ ಎಂದು ಅಭಿಪ್ರಾಯ ಪಟ್ಟರು. ಈ ವೇಳೆ ಬ್ಯಾಂಕ್ 100ನೇ ವರ್ಷಾಚರಣೆ ಅಂಗವಾಗಿ ಲಕ್ಕಿ ಕೂಪನ್ ವ್ಯವಸ್ಥೆ ಮಾಡಿದ್ದು ಶಾಖೆಯಲ್ಲಿ ಖಾತೆ ಹೊಂದಿದ ಐವರು ಗ್ರಾಹಕರು ಲಕ್ಕಿ ಬಂಪರ್ ಗಳಿಸಿಕೊಂಡರು.
ಇದನ್ನು ಆನಂದ್ ಸಿ ಕುಂದರ್ ನೆರವೆರಿಸಿಕೊಟ್ಟರು.
ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಚರ‍್ಮೇನ್ ವಿಷ್ಣುಮೂರ್ತಿ ಉಪಾಧ್ಯಾ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್, ಶ್ರೀದೇವಿ ಕಿರಣ್ ಕಾಂಪ್ಲೆಕ್ಸ್ ಮಾಲಿಕ ಶ್ರೀಕಾಂತ್ ಶೆಣೈ ಕೋಟ ಮತ್ತಿತರರು ಉಪಸ್ಥಿತರಿದ್ದರು. ಕರ್ಣಾಟಕಬ್ಯಾಂಕ್ ಕೋಟ ಶಾಖಾ ಪ್ರಭಂಧಕ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು ಸಹಾಯಕ ಪ್ರಭಂಧಕ ರಾಘವೇಂದ್ರ ರಾವ್ ವಂದಿಸಿದರು.ಬ್ಯಾAಕ್ ಸಿಬ್ಬಂದಿ ನಾಗೇಶ್ ಮಯ್ಯ ಸಹಕರಿಸಿದರು.
ಕೋಟ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭಗೊAಡು 57ನೇ ವರ್ಷದ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮತ್ಸೊ÷್ಯÃದ್ಯಮಿ ಆನಂದ್ ಸಿ ಕುಂದರ್ ಗ್ರಾಹಕರಿಗೆ ಲಕ್ಕಿಕೂಪನ್ ಗಿಫ್ಟ್ ಹಸ್ತಾಂತರಿದರು. ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಚರ‍್ಮೇನ್ ವಿಷ್ಣುಮೂರ್ತಿ ಉಪಾಧ್ಯಾ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಮತ್ತಿತರರು ಇದ್ದರು.
Leave a Reply