
ಕೋಟ :ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತ ಬದುಕು-ಬರವಣೆಗೆ ಸ್ಪೂರ್ತಿದಾಯಕವಾಗಿದ್ದು, ಯುವಜನಾಂಗ ಸುಂದರ ಬದುಕು ಕಟ್ಟಿಕೊಳ್ಳಲು ಕಾರಂತರ ಬದುಕಿನ ಹೆಜ್ಜೆಗಳು ಪೂರಕವಾಗಿದೆ, ಮನುಷ್ಯ ಬದುಕಿನಲ್ಲಿ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಕಾರಂತರು ಸ್ಪಷ್ಟ ಉದಾಹರಣೆ ಎಂದು ಸಾಹಿತ್ಯಿಕ ಚಿಂತಕ ಉಮೇಶ್ ಆಚಾರ್ಯ ಉಡುಪಿ ಅವರು ಹೇಳಿದರು.
ಅವರು ಕೋಟ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತರ ಪುಣ್ಯ ಸ್ಮರಣೆ ಅಂಗವಾಗಿ ತಿಂಗಳ ಸಡಗರ, ದತ್ತಿ ಪುರಸ್ಕಾರ, ವಿಶೇಷ ಉಪನ್ಯಾಸ, ನಾಟಕ ಪ್ರದರ್ಶನ ಅಭಿಜ್ಞಾ-2023(ಕೊನೆಯಿರದ ತಂಗುದಾಣ) ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿ ಪರ ಕೃಷಿಕ ರವೀಂದ್ರ ಐತಾಳ್ ಕೃಷಿಯಿಂದ ವಿಮುಖರಾಗದೆ ಯುವಕರು ಕೃಷಿಯಲ್ಲಿ ಒಲವು ಮೂಡಿಸಿಕೊಳ್ಳಬೇಕು, ಕೃಷಿಕರಿಗೆ ಜನರ ಪ್ರೋತ್ಸಾಹ ಕೂಡ ಮುಖ್ಯವಾದುದು ಎಂದರು.
ಈ ಸಂದರ್ಭದಲ್ಲಿ ದಿ.ಡಾ.ರಾಘವೇಂದ್ರ ಉರಾಳ ದತ್ತಿ ಪುರಸ್ಕಾರ ತಾರನಾಥ ಹೊಳ್ಳ ಕಾರ್ಕಡ, ದಿ.ಮನೋಹರ್ ತೋಳಾರ್ ಕ್ರೀಡಾ ಪುರಸ್ಕಾರ ಸುರೇಶ್ ಪೂಜಾರಿ ಪಾಂಡೇಶ್ವರ, ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ದತ್ತಿ ಪುರಸ್ಕಾರ ಕುಮಾರಿ ದೀಕ್ಷಾ ಎಸ್ ಎಮ್ ಬ್ರಹ್ಮಾವರ, ದಿ.ಉಪೇಂದ್ರ ಐತಾಳ್ ಕೃಷಿ ದತ್ತಿ ಪುರಸ್ಕಾರ ಪ್ರಗತಿಪರ ಕೃಷಿಕ ಶೀಲರಾಜ್ ಕದ್ರಿಕಟ್ಟು ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಕಾರ್ಯದರ್ಶಿ ಸುಮತಿ ಅಂಚನ್, ಸದಸ್ಯರಾದ ಎಚ್ ಪ್ರಮೋದ್ ಹಂದೆ, ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಬ್ರಹ್ಮಾವರ ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ದುರ್ಗಾ ಕಲಾ ತಂಡ ಹಾರಾಡಿ ಬ್ರಹ್ಮಾವರದವರಿಂದ ಕುಂದಗನ್ನಡದ ಹಾಸ್ಯಮಯ ನಾಟಕ ಒಂದಲ್ಲಾ ಒಂದ್ ಸಮಸ್ಯೆ ನಾಟಕ ಪ್ರದರ್ಶನವಾಯಿತು.
ಕೋಟ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ತಿಂಗಳ ಸಡಗರ, ದತ್ತಿ ಪುರಸ್ಕಾರ, ವಿಶೇಷ ಉಪನ್ಯಾಸ, ನಾಟಕ ಪ್ರದರ್ಶನ ಅಭಿಜ್ಞಾ-2023 ಕಾರ್ಯಕ್ರಮದಲ್ಲಿ ದಿ.ಡಾ.ರಾಘವೇಂದ್ರ ಉರಾಳ ದತ್ತಿ ಪುರಸ್ಕಾರ ತಾರನಾಥ ಹೊಳ್ಳ ಕಾರ್ಕಡ, ದಿ.ಮನೋಹರ್ ತೋಳಾರ್ ಕ್ರೀಡಾ ಪುರಸ್ಕಾರ ಸುರೇಶ್ ಪೂಜಾರಿ ಪಾಂಡೇಶ್ವರ, ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ದತ್ತಿ ಪುರಸ್ಕಾರ ಕುಮಾರಿ ದೀಕ್ಷಾ ಎಸ್ ಎಮ್ ಬ್ರಹ್ಮಾವರ, ದಿ.ಉಪೇಂದ್ರ ಐತಾಳ್ ಕೃಷಿ ದತ್ತಿ ಪುರಸ್ಕಾರ ಪ್ರಗತಿಪರ ಕೃಷಿಕ ಶಿಶೀಲರಾಜ್ ಕದ್ರಿಕಟ್ಟು ಅವರಿಗೆ ಪ್ರದಾನ ಮಾಡಲಾಯಿತು.
Leave a Reply