
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 51 ಖಾಸಗಿ ಶಾಲೆಗಳು, ಕೆ.ಪಿ.ಎಸ್ ಮತ್ತು ಪಿ ಎಂ ಶ್ರೀ ಶಾಲೆಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ ಸರಕಾರಿ ಶಾಲೆಗಳು ಕೂಡ 40 ಕ್ಕಿಂತಲೂ ಹೆಚ್ಚಿದೆ.
ಹೆಚ್ಚಿನ ಎಲ್ಲಾ ಶಾಲೆಗಳ ಮಕ್ಕಳು ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸ ಬೇಕಿದ್ದು,ಸರ್ಕಾರದ ಮಟ್ಟದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಇರುವಂತಹ ಯಶಸ್ವಿ ಕಾರ್ಯಕ್ತಮವು,ಅದರಲ್ಲೂ ಸರಕಾರಿ ಶಾಲೆಗಳ ಶಿಕ್ಷಕರ ಅನಾಸ್ತೆಯ ಕಾರಣ ಹೆಚ್ಚಿನ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ
ಈ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಕಾರಂಜಿಯಲ್ಲಿ ಕಡಬ ತಾಲೂಕಿನ ಒಂದು ಮೂಲೆಯಲ್ಲಿರುವ ಬಿಳಿನೆಲೆ ಕೈಕಂಬ ಶಾಲೆಯ ಮಕ್ಕಳಿಗೆ ದೊರೆತಂತಹ . ಶಿಕ್ಷಕರ ಸೂಕ್ತ ಮಾರ್ಗದರ್ಶನದ ಕಾರಣದಿಂದ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಸಮಗ್ರವಾಗಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಶಾಲೆಯಲ್ಲಿ ಇರುವ ದಾಖಲಾತಿ ಕೇವಲ 42
ಅದರಲ್ಲೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇರುವಂತಹ 26 ಮಕ್ಕಳನ್ನೇ ಬಳಸಿಕೊಂಡು ತಾಲೂಕು ಮಟ್ಟದಲ್ಲಿ ಘಟಾನುಘಟಿ ಖಾಸಗಿ ಶಾಲೆಗಳು,ಹಾಗೂ ಸರಕಾರಿ ಶಾಲೆಗಳೊಂದಿಗೆ ಸ್ಪರ್ದಿಸಿ ಸಮಗ್ರ ಪ್ರಶಸ್ತಿಯನ್ನು ಮುಡಿಗೆ ಏರಿಸಿ ಕೊಂಡಿರುವುದು, ಉಳಿದ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಮಾರ್ಗ ದರ್ಶನವನ್ನು ನೀಡಿ ತಯಾರು ಮಾಡಿರಬಹುದು ಎಂಬುವುದರ ಬಗ್ಗೆ ಆಲೋಚನೆ ಮಾಡಬೇಕಿದೆ.
ಕ್ಲಸ್ಟರ್
ಹಂತದಲ್ಲಿ 8 ವೈಯಕ್ತಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಕೈಕಂಬ ಶಾಲೆ ಮಕ್ಕಳಲ್ಲಿ 4 ಪ್ರಥಮ ಸ್ಥಾನದಲ್ಲಿದ್ದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಕಿರಿಯ ವಿಭಾಗದಲ್ಲಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯ ಪ್ರಧಾನ ಕಾರ್ಯದರ್ಶಿ ಸಾಜಸ್ ಕೆ ಜಿ ಯವರ ಮಗಳಾದ ಅಯೊರ ಆಶುಭಾಷಣ ಮತ್ತು ಕಥೆ ಹೇಳುವ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದು, ಹಿರಿಯ ವಿಭಾಗದಲ್ಲಿ ತನುಶ್ರೀ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಗಿರುತ್ತಾರೆ. ಅಲ್ಲದೇ, ಈ ಶಾಲೆಯು ಸರಕಾರಿ ಶಾಲೆಗಳ ಯೋಜನೆಗಳ ಮಹತ್ವ ಎತ್ತಿ ಹಿಡಿದು, ಸರ್ವ ಶಿಕ್ಷಣ ಅಭಿಯಾನದ ಕುರಿತಾಗಿ ಮಾಡಿದ ಛದ್ಮವೇಷ ಸಹಾ ಎಲ್ಲರ ಗಮನ ಸೆಳೆಯಿತು.
ಇದೇ ಬಿಲಿನೆಲೆ ಕೈಕಂಬ ಶಾಲೆಯು ದೈಹಿಕ ಶಿಕ್ಷಕರಿಲ್ಲದೆಯೇ ಹಿಂದಿನ ವರ್ಷಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ್ದು, ಸರಕಾರಿ ದೈಹಿಕ ಶಿಕ್ಷಕರು ಇರುವಂತಹ ಶಾಲೆಗಳಲ್ಲಿ ಮಕ್ಕಳಿಗೆ ಅನ್ಯಾಯ ವಾಗುತ್ತಿರುವುದನ್ನು ಇಲಾಖೆಯು ಇನ್ನು ಮುಂದೆಯಾದರೂ ಗಮನಿಸಿ ಮಾರ್ಗದರ್ಶನವನ್ನು ನೀಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ
ಕರ್ತವ್ಯಬದ್ಧ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಕಾಳಜಿಯಿರುವ ಶಿಕ್ಷಕರಿದ್ದಾಗ, ಕೊರತೆಗಳು ಮತ್ತು ಇತರ ವಿಚಾರಗಳು ನಗಣ್ಯ ಎಂದು ಈ ಶಾಲೆಯ ಶಿಕ್ಷಕಿಯರು ಸಾಧಿಸಿ ತೋರಿಸುತ್ತಿದ್ದಾರೆ.
“ಎಲ್ಲಾ ಮಕ್ಕಳಲ್ಲಿಯೂ ಒಂದೊಂದು ಪ್ರತಿಭೆ ಮತ್ತು ಸಾಧಿಸುವ ಮನೋಬಲ ಇರುತ್ತದೆ. ಅದನ್ನು ಗುರುತಿಸಿ, ಸೂಕ್ತವಾದ ಅವಕಾಶ ಸಿಗುವಾಗ ಅದನ್ನು ಮಕ್ಕಳು ಸಮರ್ಪಕವಾಗಿ ಬಳಸಲು ಧೈರ್ಯ ತುಂಬಿ, ವೇದಿಕೆ ಕಲ್ಪಿಸಿ ಕೊಡುವುದು ಶಿಕ್ಷಕರಾದ ನಮ್ಮ ಕರ್ತವ್ಯವಾಗಿದೆ. ನನ್ನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ನನಗೆ ಹೆಮ್ಮೆಯಿದೆ- ಪವಿತ್ರ ಎ, ಪ್ರಭಾರ ಮುಖ್ಯಗುರುಗಳು.”














Leave a Reply