ಗಿಳಿಯಾರು ಯುವಕ ಮಂಡಲದಿಂದ ಶಾಲಾ ಕಾಂಪೌಂಡ್ ಗೇಟ್ ಕೊಡುಗೆ
ಕೋಟ: ಇಲ್ಲಿನ ಮೂಡುಗಿಳಿಯಾರು ಸಂಯುಕ್ತ ಪ್ರೌಢಶಾಲೆ ಸುಸಜ್ಜಿತ ಕಂಪೌAಡ್ ಗೇಟ್ ಅನ್ನು ಸ್ಥಳೀಯ ಗಿಳಿಯಾರು ಯುವಕ ಮಂಡಲದ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಗೇಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಕೋಟ ಗ್ರಾ.ಪಂ ಅಧ್ಯಕ್ಷ ಜ್ಯೋತಿ ಬಿ.ಶೆಟ್ಟಿ, ಸದಸ್ಯರಾದ ಯೋಗೇಂದ್ರ ಪೂಜಾರಿ,ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ,ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು,ನ್ಯಾಯವಾದಿ ಟಿ.ಮಂಜುನಾಥ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಮಾಜಿ ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ ,ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಸಂತಿ,ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜೂಲಿಯಟ್ ಕ್ರಾಸ್ತಾ,ದೈಹಿಕ ಶಿಕ್ಷಕ ಶೇಖರ್ , ಗಿಳಿಯಾರು ಯುವಕ ಮಂಡಲದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಗಿಳಿಯಾರು ಯುವಕ ಮಂಡಲದ ವತಿಯಿಂದ ಮೂಡುಗಿಳಿಯಾರು ಸಂಯುಕ್ತ ಪ್ರೌಢಶಾಲೆ ಸುಸಜ್ಜಿತ ಕಂಪೌAಡ್ ಗೇಟ್ ಅನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಲೋಕಾರ್ಪಣೆಗೊಳಿಸಿದರು. ಕೋಟ ಗ್ರಾ.ಪಂ ಅಧ್ಯಕ್ಷ ಜ್ಯೋತಿ ಬಿ.ಶೆಟ್ಟಿ, ಸದಸ್ಯರಾದ ಯೋಗೇಂದ್ರ ಪೂಜಾರಿ, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್ ಜಿ,ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು, ನ್ಯಾಯವಾದಿ ಟಿ.ಮಂಜುನಾಥ್ ಮತ್ತಿತರರು ಇದ್ದರು.















Leave a Reply