Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಷ್ಟ್ರೀಯ ಸ್ವಯಂ ಸೇವಕ ಹಿರಿಯ ಮುಖಂಡ ರಾಜೀವ ದೇವಾಡಿಗರಿಗೆ ನುಡಿನಮನ
ಗ್ರಾಮೀಣ ಭಾಗದ ಸಂಘ ಶಕ್ತಿ ಜೀವಾಳ – ಬಡಾಮನೆ ರತ್ನಾಕರ್ ಶೆಟ್ಟಿ

ಕೋಟ: ರಾಜೀವ ದೇವಾಡಿಗರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮೀಣ ಭಾಗದಲ್ಲಿ ಕಟ್ಟಿಬೆಳೆಸಿದ್ದಾರೆ ಅವರು ಈ ಭಾಗದ ಸಂಘದ ಜೀವಾಳವಾಗಿದ್ದರು ಅಂತಹ ಮಹಾನ್ ಚೇತನ ಸಂಘಶಕ್ತಿಯಾಗಿರದೆ ಸಹಕಾರಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ವಿಶಿಷ್ಟ ಸೇವೆಯನ್ನು ನೀಡಿದ್ದಾರೆ ಎಂದು ಮುಂಬೈಯ ಸಮಾಜಸೇವಕ ಉದ್ಯಮಿ ಬಡಾಮನೆ ರತ್ನಾಕರ್ ಶೆಟ್ಟಿ ಮುಂಬೈ ನುಡಿದರು.
ಶುಕ್ರವಾರ ಕೋಟದ ಮಹತೋಭಾರ ಶ್ರೀಹಿರೇಮಹಾಲಿಂಗೇಶ್ಚರ ದೇಗುಲದಲ್ಲಿ ರಾಜೀವ ದೇವಾಡಿಗರಿಗೆ ನುಡಿಮನ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದ ಒರೆಕೋರೆಗಳನ್ನು ತಿದ್ದಿತ್ತಾ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಸೇವಾ ಮನೋಭಾವನೆಯನ್ನು ಈ ಸಮಾಜಕ್ಕೆ ಧಾರೆ ಎರೆದ ಮಹಾನ ಪುರುಷ ದೇವಾಡಿಗರಾಗಿದ್ದಾರೆ ಎಂದರು.
ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್,ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ,ವಾದಿರಾಜ್ ಭಟ್,ಯೋಗೀಶ್ ನಾಯಕ್,ವಸುಧಾ ಪ್ರಭು, ಸುಶೀಲಸೋಮಶೇಖರ್, ದೇವದತ್ತ ಭಟ್, ಉಪನ್ಯಾಸಕ ಸಂಜೀವ ಗುಂಡ್ಮಿ, ಮಾಜಿ ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಮತ್ತಿತರರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ,ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ರಾಜೀವ ದೇವಾಡಿಗರ ಪುತ್ರರಾದ ಅಜಿತ್ ದೇವಾಡಿಗ ,ಭಗತ್ ದೇವಾಡಿಗ,ಗಣ್ಯರಾದ ದೇವಪ್ಪ ಕಾಂಚನ್,ಸAಘದ ಪ್ರಮುಖರಾದ ಸುರೇಂದ್ರ ಪೂಜಾರಿ ಕೋಡಿ, ಅಣ್ಣಪ್ಪ ಕೋಟೇಶ್ವರ , ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು. ರಾಜೀವ ದೇವಾಡಿಗರ ಕುರಿತಾಗಿ ಪ್ರಸಾದ್ ಬಿಲ್ಲವ ಪರಿಚಯಿಸಿದರು. ಸಂಘದ ಹಿರಿಯರಾದ ಯಡಬೆಟ್ಟು ಪಂಜು ಪೂಜಾರಿ ಗಾಯನದ ಮೂಲಕ ನಮನ ಸಲ್ಲಿಸಿದರು.ಕಾರ್ಯಕ್ರಮ ಸಂಘದ ಪ್ರಮುಖರಾದ ಶ್ರೀಕಾಂತ್ ಸಾಲಿಗ್ರಾಮ ನಿರೂಪಿದರು.

ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ಚರ ದೇಗುಲದಲ್ಲಿ ರಾಜೀವ ದೇವಾಡಿಗರಿಗೆ ನುಡಿಮನ ಕಾರ್ಯಕ್ರಮದಲ್ಲಿ ಮುಂಬೈಯ ಸಮಾಜಸೇವಕ ಉದ್ಯಮಿ ಬಡಾಮನೆ ರತ್ನಾಕರ್ ಶೆಟ್ಟಿ ಮುಂಬೈ ಮಾತನಾಡಿದರು. ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ, ವಾದಿರಾಜ್ ಭಟ್, ಯೋಗೀಶ್ ನಾಯಕ್, ವಸುಧಾ ಪ್ರಭು, ಸುಶೀಲ ಸೋಮಶೇಖರ್, ದೇವದತ್ತ ಭಟ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *