• Fri. Jul 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಐರೋಡಿ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಣಿ ಉದ್ಘಾಟನಾ ಕಾರ್ಯಕ್ರಮಗಳು

ByKiran Poojary

Dec 3, 2023

ಕೋಟ: ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖಾ ಅನುದಾನದಡಿ ಪುನರ್ವ್ಯವಸ್ಥಿತಗೊಳಿಸಿದ ಎಲ್ ಕೆಜಿ,ಯುಕೆಜಿ ತರಗತಿಯ ಕೊಠಡಿ ಸೋಮವಾರ ಉದ್ಘಾಟನೆಗೊಂಡಿತು.

ದಾನಿಗಳಾದ ಶ್ರೀಕರ ಮೆಂಡನ್, ಕೋಡಿ ಕನ್ಯಾನ ಇವರು ಕೊಡಮಾಡಿದ ಪೋಡಿಯಂನ ಮತ್ತು ಉದ್ಯಮಿ ಸ್ಟಾ÷್ಯನ್ಲಿ ಡಿಸೋಜಾ, ಪಾಂಡೇಶ್ವರ ಮತ್ತು ಮಹಾಬಲ ಉಪಾಧ್ಯ ಉಡುಪಿ ಹಾಗೂ ಶಾಲಾ ಎಸ್‌ಡಿಎಂಸಿ ಇವರ ಪ್ರಾಯೋಜಕತ್ವದಲ್ಲಿ ಸ್ಮಾರ್ಟ್ ಟಿ.ವಿ ಉದ್ಘಾಟನಾ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪುನರ್ವ್ಯವಸ್ಥಿತಗೊಳಿಸಿದ ಎಲ್ ಕೆಜಿ,ಯುಕೆಜಿ ತರಗತಿಯ ಕೊಠಡಿ ಉದ್ಘಾಟಿಸಿ, ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುವುದಕ್ಕೆ ಈ ಶಾಲೆಯ ಬೆಳವಣಿಗೆಯೇ ಸಾಕ್ಷಿ. ಈ ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ಸಮುದಾಯ ಮತ್ತು ಉತ್ತಮ ಶಿಕ್ಷಕ ವರ್ಗ ದುಡಿಯುತ್ತಿರುವುದು ಖುಷಿಯ ವಿಚಾರ. ಇದೇ ಸಹಕಾರ ಸಿಗಲಿ ಇನ್ನೂ ಎತ್ತರಕ್ಕೆ ಶಾಲೆ ಬೆಳೆಯಲಿ ಎಂದು ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ವಲಯದ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ, ಸ್ಥಳೀಯ ಜನಪ್ರತಿನಿಧಿ ಸುಧಾಕರ ಪೂಜಾರಿ, ಬ್ರಹ್ಮಾವರ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ , ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ವಿಜಯ್ ಪೂಜಾರಿ, ಸಾಸ್ತಾನ ವ್ಯವಸಾಯಿಕ ಸಹಕಾರಿ ಸಂಘದ ಸಿಇಓ ವಿಜಯ್ ಪೂಜಾರಿ, ಪಾಂಡೇಶ್ವರ ರಕೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ , ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲ ಕಾರ್ಯದರ್ಶಿ ಲಲಿತಾ ಪೂಜಾರಿ, ಯೋಗೀಶ್ ಬ್ರಹ್ಮಾವರ ಉಪಸ್ಥಿತರಿದ್ದರು.

ಕಾರ್ಯ್ರಮದಲ್ಲಿ ಶಾಲಾಭಿವೃದ್ಧಿಗೆ ಸಹಕರಿಸಿದ ಸತೀಶ್ ನಾಯ್ಕ್, ಗುಲಾಬಿ ಮಡಿವಾಳ, ಪೂರ್ಣಿಮಾ ಸತೀಶ್ , ವಿಜಯ್ ಪೂಜಾರಿ ಮತ್ತು ರಾಜು ಮರಕಾಲರನ್ನು ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕ್ರೀಡಾ ಕೂಟ ಮತ್ತು ಸಾಂಸ್ಕöÈತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಸರ್ಕಾರ ನೀಡಿದ ಎರಡನೇ ಸಮವಸ್ತçಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ಸಹ ಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಮಹೇಶ್ ಮರಕಾಲ ನಿರೂಪಿದರು.

ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖಾ ಅನುದಾನದಡಿ ಪುನರ್ವ್ಯವಸ್ಥಿತಗೊಳಿಸಿದ ಎಲ್ ಕೆಜಿ,ಯುಕೆಜಿ ತರಗತಿಯ ಕೊಠಡಿಯನ್ನು ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಉದ್ಘಾಟಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್, ಬ್ರಹ್ಮಾವರ ವಲಯದ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ, ಸ್ಥಳೀಯ ಜನಪ್ರತಿನಿಧಿ ಸುಧಾಕರ ಪೂಜಾರಿ, ಬ್ರಹ್ಮಾವರ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *