
ಕೋಟ: ಬ್ರಹ್ಮಾವರ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಿಂಗಳಲ್ಲಿ ೬೨೩ ಮಾನವ ದಿನಗಳನ್ನು ಸೃಜಿಸಿ ತಾಲೂಕಿನ ೨೭ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮಸ್ಥರಿಗೆ ವೈಯಕ್ತಿಕ ಅನುದಾನ ಒದಗಿಸುವಲ್ಲಿ ಅತ್ಯುತ್ತಮ ಯೋಜನೆಯಾಗಿದ್ದು ಕೃಷಿಭಾವಿ,ದನದ ಹಟ್ಟಿ, ಕೋಳಿಗೂಡು, ಗೊಬ್ಬರದ ಗುಂಡಿ, ಎರೆಹುಳು ತೊಟ್ಟಿ, ಬಚ್ಚಲು ಗುಂಡಿ, ಪೌಷ್ಟಿಕ ತೋಟ ಇತ್ಯಾದಿಗಳ ರಚನೆಗೆ ಅವಕಾಶವಿದ್ದು ಗ್ರಾಮಸ್ಥರು ೨೦೨೪-೨೫ ಸಾಲಿನ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಈ ಯೋಜನೆ ಲಾಭ ಪಡೆಯಬೇಕಾಗಿ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ
Leave a Reply