ಕೋಟ: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು. ಶ್ರೀ ದೇಗುಲದ ಆಡಳಿತಾಧಿಕಾರಿ,ಬ್ರಹ್ಮಾತ ತಾಲೂಕು ದಂಡಾಧಿಕಾರಿ ಶ್ರೀಕಾಂತ್ ಹೆಗ್ಡೆ ಪೂಜಾ ವಿಧಿವಿಧಾನದಲ್ಲಿ ಭಾಗಿಯಾದರು.

ಶ್ರೀ ದೇಗುಲದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್,ಟ್ರಸ್ಟ್ ಮಾಜಿ ಸದಸ್ಯ ಜಿ.ಸತೀಶ್ ಹೆಗ್ಡೆ,ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ,ದೇಗಲದ ವ್ಯವಸ್ಥಾಪಕ ಗಣೇಶ್ ಹೊಳ್ಳ,ಅರ್ಚಕ ಪ್ರತಿನಿಧಿ ಕೃಷ್ಣ ಜೋಗಿ,ಮತ್ತಿತರರು ಇದ್ದರು. ಹಣತೆ ಸಾಲುಗಳಿಗೆ ಭಕ್ತಾಧಿಗಳು ದೀಪ ಬೆಳಗಿಸಿದರು. ಸುಡುಮದ್ದು ಪ್ರದರ್ಶನ,ಪನ್ಯಾರ ಸೇವೆ, ಭಕ್ತಾಧಿಗಳು ದೇಗುಲದ ಎದುರು ರಂಗೋಲಿ ಚಿತ್ರ , ದೇಗುಲವನ್ನು ಹೂ ಗಳಿಂದ ಅಲಂಕರಿಸಲಾಗಿತ್ತು.
ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು..