ಕೋಟ: ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀರಾಮ ಮಂದಿರದ ದಿವ್ಯ ಸನ್ನಿಧಿಯಲ್ಲಿ ಡಿ.10 ಭಾನುವಾರದಂದು ಸಾಮೂಹಿಕ ದೀಪೋತ್ಸವ ಹಾಗೂ ರಂಗ ಪೂಜೆ ಕಾರ್ಯಕ್ರಮ ನಡೆಯಲಿದ್ದು ಈ ಪ್ರಯುಕ್ತ ಸಂಜೆ 5 ಗಂಟೆಯಿAದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ರಂಗ ಪೂಜೆ ಹಾಗೂ ಮಹಾಮಂಗಳಾರತಿ ಸೇವೆ ನಡೆಯಲಿದೆ.
ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀ ಪಟ್ಟಾಭಿರಾಮಚಂದ್ರ ಮಂದಿರದ ಆಡಳಿತ ಮಂಡಳಿ ಕೋರಿದೆ.