
ಕೋಟ: ಇಲ್ಲಿನ ಕೋಟ ಪೇಟೆ ದೇವಸ್ಥಾನ ವರುಣತೀರ್ಥ ಶ್ರೀರಾಜಶೇಖರ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಡಿ.12ರಂದು ನಡೆಯಿತು. ವಿಶೇಷ ಪೂಜಾ ಕಾರ್ಯದ ಅಂಗವಾಗಿ ಶತರುದ್ರಾಭಿಷೇಕ, ಕಲಶಾಭಿಷೇಕ, ರಂಗಪೂಜೆ, ಮಹಾಮಂಗಳಾರತಿ, ಭಜನೆ, ಅನ್ನಸAತರ್ಪಣೆ ಕಾರ್ಯಕ್ರಮಗಳು ನೆರವೆರಿತು.
ದೀಪಾಲಂಕಾರದ ನಡುವೆ ಭಕ್ತ ಸಮುದಾಯ ಹಣತೆಗಳಲ್ಲಿ ಜ್ಯೋತಿ ಬೆಳಗಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಧಾರ್ಮಿಕ ಕೈಂಕರ್ಯವನ್ನು ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಪ್ರಭಾಕರ್ ಅಡಿಗ ,ವೇ.ಮೂ ಸುಬ್ರಹ್ಮಣ್ಯ ಅಡಿಗ ನೆರವರಿಸಿದರು, ವಿವಿಧ ಭಾಗಗಳ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಜರಗಿತು. ದೇಗುಲದ ಟ್ರಸ್ಟಿ ಅಮೃತ್ ಜೋಗಿ,ದೇವದಾಸ್ ಕಾಂಚನ್,ಶೈಲಜಾ, ವೆಂಕಟೇಶ ಪ್ರಭು, ಸವಿತಾ ಉಡುಪ, ಗಿರೀಶ್ ದೇವಾಡಿಗ, ಸುರೇಶ್ ಬತ್ತಡ, ಸುರೇಶ್ ಗಾಣಿಗ, ಸ್ಥಳೀಯರಾದ ಚಂದ್ರ ಆಚಾರ್, ಶ್ರಿಕಾಂತ್ ಶೆಣೈ, ಸತೀಶ್ ಹೆಗ್ಡೆ, ಸಂತೋಷ್ ಪ್ರಭು , ಸುರೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಕೋಟ ಪೇಟೆ ದೇವಸ್ಥಾನ ವರುಣತೀರ್ಥ ಶ್ರೀರಾಜಶೇಖರ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಜರಗಿತು. ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಪ್ರಭಾಕರ್ ಅಡಿಗ, ದೇಗುಲದ ಟ್ರಸ್ಟಿ ಅಮೃತ್ ಜೋಗಿ,ದೇವದಾಸ್ ಕಾಂಚನ್,ಶೈಲಜಾ,ವೆAಕಟೇಶ ಪ್ರಭು ಮತ್ತಿತರರು ಇದ್ದರು.
Leave a Reply