ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಧಾರ್ಮಿಕ ಸಭೆ ಇತ್ತೀಚಿಗೆ ಜರುಗಿತು. ಪೂರ್ವಾಹ್ನ 5ರಿಂದ ಧಾರ್ಮಿಕ ಕಾರ್ಯಕ್ರಮವನ್ನು ನರಸಿಂಹ ದೇವರಲ್ಲಿ ಪ್ರಾರ್ಥಿಸುವ ಮೂಲಕ ಆರಂಭಿಸಿ, 108 ರಲ್ಲಿ ನವಗ್ರಹ ಹೋಮ,ಸಹಸ್ರೆöಕ್ಯ ಶನಿ ಶಾಂತಿ, ಗಣ ಹೋಮ,ನರಸಿಂಹ ಹೋಮ,ಸುಂದರಕಾಂಡ ಪಾರಾಯಣ, ಚಂಡಿಕಾ ಪಾರಾಯಣ ನಡೆಯಿತು. ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರು ಶ್ರೀ ವಿಷ್ಣು ಸಹಸ್ರನಾಮ ಮತ್ತು ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಿದರು.
ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಟ್ರಸ್ಟಿಗಳಾದಗಳಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ ಅಶೋಕ ಭಟ್ ದಂಪತಿ,ಕಾರ್ಯದರ್ಶಿ ರಾಮನಾಥ ಅಲ್ಸೆ ದಂಪತಿ,ಕೋಶಾಧಿಕಾರಿ ಪಟ್ಟಾ ಭಿರಾಮ ಸೋಮಯಾಜಿ, ಸಾಲಿಗ್ರಾಮ ವಲಯದ ಅಧ್ಯಕ್ಷ ಎಮ್ ಶಿವರಾಮ ಉಡುಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್, ಆಡಳಿತ ಮಂಡಳಿಯ ಚಂದ್ರಶೇಖರ್ ಉಪಾಧ್ಯಾಯ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಜನಾರ್ದನ ಅಡಿಗ ಇದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿಶೇಷ ಸಾಧನೆಗೈದ ಮಹನೀಯರನ್ನು ಮತ್ತು ಜನಪದ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಶಿರೂರು ಮಠದ ದಿವಾನರು ಡಾ. ಉದಯ್ ಕುಮಾರ್ ಸರಳತ್ತಾಯ ಧಾರ್ಮಿಕ ಪ್ರವಚನ ನೀಡಿದರು.ನಂತರ ಕಾರ್ಯಕ್ರಮ ಸಂಪನ್ನಗೊಂಡಿತು.
ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ವಾರ್ಷಿಕ ಮಹಾಸಭೆ ಸಾಲಿಗ್ರಾಮ ಶ್ರೀ ದೇಗುಲದಲ್ಲಿ ಜರಗಿತು. ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ ಅಶೋಕ ಭಟ್ ದಂಪತಿ,ಕಾರ್ಯದರ್ಶಿ ರಾಮನಾಥ ಅಲ್ಸೆ ದಂಪತಿ,ಕೋಶಾಧಿಕಾರಿ ಪಟ್ಟಾ ಭಿರಾಮ ಸೋಮಯಾಜಿ ಮತ್ತಿತರರು ಇದ್ದರು.