ಕೋಟ; ಈ ಕಂಪ್ಯುಟರ್ ಯುಗದಲ್ಲಿ ಮಕ್ಕಳನ್ನು ಸಾಂಸ್ಕೃತಿಕ ಲೋಕದ ಬಗ್ಗೆ ಆಸಕ್ತಿಯನ್ನು ಮತ್ತು ಯಕ್ಷಗಾನದ ಉಪಯುಕ್ತತೆಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಪ್ರಯತ್ನ ಶ್ಲಾಘನೀಯ. ಇದಕ್ಕೆ ಸಂಸ್ಥೆಯ ಕಾರ್ಯ ಅಭಿನಂದನೀಯ. ಯಕ್ಷಗಾನ ಕಲಿಯುವುದರಿಂದ ಅವರ ವಿದ್ಯಾಭ್ಯಾಸ ಮುನ್ನೆಡೆಯಲು ಸಹಕಾರಿಯಾಗುತ್ತದೆ. ಮಾತ್ರವಲ್ಲ ಜೀವನವೂ ಯಶಸ್ವಿಯಾಗುವುದರೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನೊಳಗೊAಡ ಸಮಾಜ ನಿರ್ಮಾಣವಾಗುತ್ತದೆ ಎಂದು ಕುಂದಾಪುರದ ಉದ್ಯಮಿ ಕೆ.ಆರ್. ನಾಯಕ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಸಂಸ್ಥೆಯವರು ಏರ್ಪಡಿಸಿರುವ ನಲಿ ಕುಣಿ ಯಕ್ಷಗಾನ ಅಭಿನಯ ಮತ್ತು ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದರು. ಸಭಾಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್ ಸಂಚಾರಿ ನಿಗಮ ಲಿಮಿಟೆಡನ ನಿವೃತ್ತ ಸಹಾಯಕ ಮಹಾ ಪ್ರಭಂಧಕ ಸತ್ಯನಾರಾಯಣ ಪುರಾಣಿಕ್ ಮಾತನಾಡುತ್ತಾ ಉತ್ತಮವಾದ ಯಕ್ಷಗಾನ ಶಿಕ್ಷಣ ನೀಡುವ ಆಲೋಚನೆಯಿಂದ ನಡೆಸುತ್ತಿರುವ ಈ ಶಿಬಿರ ನಿಜಕ್ಕೂ ಶ್ಲಾಘನೀಯ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಶಿಬಿರದ ಪ್ರಾಚಾರ್ಯ ಸದಾನಂದ ಐತಾಳರು ಉಪಸ್ಥಿತರಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಸ್ಥಾವನೆಯೊಂದಿಗೆ ಸ್ವಾಗತಿಸಿದರು. ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿದರು. ಬಸ್ರೂರು ಪ್ರಭಾಕರ ಐತಾಳ್ ವಂದಿಸಿದರು.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಸಂಸ್ಥೆಯವರು ಏರ್ಪಡಿಸಿರುವ ನಲಿ ಕುಣಿ ಯಕ್ಷಗಾನ ಅಭಿನಯ ಮತ್ತು ತರಬೇತಿ ಶಿಬಿರವನ್ನು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಶಿಬಿರದ ಪ್ರಾಚಾರ್ಯರಾದ ಸದಾನಂದ ಐತಾಳರು ಉಪಸ್ಥಿತರಿದ್ದರು.