• Tue. Nov 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಲೋಕೋಪಯೋಗಿ ಇಲಾಖೆಯಿಂದ ಕಳಪೆ ಕಾಮಗಾರಿ ಅನುಷ್ಠಾನ -ಸಾರ್ವಜನಿಕ ತೆರಿಗೆ ಹಣ ನೀರಲ್ಲಿ ಹೋಮ – ಆಟಕ್ಕುಂಟು ಲೆಕ್ಕಕ್ಕಿಲ್ಲ ಲಿಫ್ಟ್ ಸೌಲಭ್ಯ – ತಾಲ್ಲೂಕು ಆಡಳಿತ, ಶಾಸಕ ವಿರುದ್ಧ ಕಿಡಿಕಿಡಿ ತೀ. ನಾ ಶ್ರೀನಿವಾಸ್

ByKiran Poojary

Oct 8, 2024

ಸಾಗರ ತಾಲ್ಲೂಕು ಆಡಳಿತ ಸೌಧ ಸಮಸ್ಯೆಗಳ ಆಗರ – 10 ಕೋಟಿಗೂ ಹೆಚ್ಚಿನ ಅನುದಾನ ಬಳಸಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಕಳಪೆ ಕಾಮಗಾರಿ ಅನುಷ್ಠಾನ -ಸಾರ್ವಜನಿಕ ತೆರಿಗೆ ಹಣ ನೀರಲ್ಲಿ ಹೋಮ – ಆಟಕ್ಕುಂಟು ಲೆಕ್ಕಕ್ಕಿಲ್ಲ ಲಿಫ್ಟ್ ಸೌಲಭ್ಯ – ತಾಲ್ಲೂಕು ಆಡಳಿತ, ಶಾಸಕ ವಿರುದ್ಧ ಕಿಡಿಕಿಡಿ ತೀ. ನಾ ಶ್ರೀನಿವಾಸ್, ರವಿ ಕುಗ್ವೆ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ರಮೇಶ್ ಕೆಳದಿ.

ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಹತ್ತು ಹಲವಾರು ಹೋರಾಟಕ್ಕೆ ಅಣಿಯಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ನೀಡಿದ ನಿದರ್ಶನಗಳು ದೇಶಕ್ಕೆ ಮಾದರಿಯಾದ ನಮ್ಮ ಹೆಮ್ಮೆಯ ಸಾಗರ ತಾಲ್ಲೂಕು ಅಪವಾದ ಎಂಬಂತೆ ಬೇಜವಾಬ್ದಾರಿ ಅಧಿಕಾರಿಗಳು ಚುನಾಯಿತ ಜನ ಪ್ರತಿನಿಧಿಗಳ ನಿರ್ಲಕ್ಷತನದಿಂದಾಗಿ ಸಾಗರ ತಾಲ್ಲೂಕು ಆಡಳಿತ ಸೌಧ ಒಂದಿಲ್ಲೊಂದು ವಿವಾದದತ್ತ ಬಾಯಿ ತೆರೆದು ಕೊಳ್ಳುತ್ತಿದೆ. ಮಳೆಗಾಲ ಬಂದಿತೆಂದರೆ ಕಟ್ಟಡದ ಮೂಲೆ ಮೂಲೆಗಳಲ್ಲಿ ಸೋರುವುದು ಸರ್ವೇ ಸಾಮಾನ್ಯವಾಗಿದೆ. ತಹಸೀಲ್ದಾರ್ & ಉನ್ನತ ಅಧಿಕಾರಿಗಳು ಮೊದಲ ಅಂತಸ್ತಿನಲ್ಲಿ ವಿರಾಜಮಾನರಾದ ಬೇಜವಾಬ್ದಾರಿ ಅಧಿಕಾರಿಗಳನ್ನು ಸರ್ಕಾರಿ ಸೇವಾ ಸೌಲಭ್ಯಕ್ಕಾಗಿ  ಭೇಟಿ ಮಾಡಲು ವಿಶೇಷ ವಿಕಲಚೇತನರು, ಹಿರಿಯ ನಾಗರೀಕರುಗಳು ಮೆಟ್ಟಿಲು ಹತ್ತುವ ಹರಸಾಹಸ ಪಡುತ್ತಿರುವ ಅನಿವಾರ್ಯ ಸ್ಥಿತಿ ಲಿಫ್ಟ್ ಸೇವೆ ಮಾತ್ರಾ ಸಾರ್ವಜನಿಕ ರಿಗೆ ಗಗನಕುಸುಮವಾಗಿದೆ.

*ಸಾಗರ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆ ಆಗಿ ವರ್ಷಗಳೇ ಕಳೆದಿಲ್ಲ, ಕಳಪೆ ಕಾಮಗಾರಿ ಅನುಷ್ಠಾನದ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕೆ ತನಿಖೆಗೆ ಮುಂದಾಗದೇ ಮೌನಕ್ಕೆ ಜಾರಿದ ಶಾಸಕ ಗೋಪಾಲ ಕೃಷ್ಣ ಬೇಳೂರು ವಿರುದ್ಧ ತೀವ್ರ ಆಕ್ರೋಶದತ್ತ ತೀ. ನಾ ಶ್ರೀನಿವಾಸ್*

*ತಹಸೀಲ್ದಾರ್ ADLR ಅಧಿಕಾರಿಗಳು ಮೊದಲನೇ ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ವಿಕಲಚೇತನರೂ, ಹಿರಿಯ ನಾಗರೀಕರುಗಳಿಗೆ ತುಂಬಾ ತೊಂದರೆಯಾಗುತ್ತಿದೆ ಕೂಡಲೇ ಕೆಳ ಅಂತಸ್ಥಿನಲ್ಲಿ ಕಾರ್ಯಭಾರ ನೆಡೆಸುವಂತೆ ಆಗ್ರಹ – ಮಾಜಿ ಜಿಲ್ಲಾಪಂಚಾಯತ್ ಸದಸ್ಯ ರವಿ ಕುಗ್ವೆ*

*ಸಾಗರ ತಾಲ್ಲೂಕು ಆಡಳಿತ ಸೌಧ ಕಳಪೆ ಕಾಮಗಾರಿ ವಿರುದ್ಧ ಡಾ. ಗಣಪತಪ್ಪ ಸ್ಥಾಪಿತ ರೈತ ಸಂಘ ತೀವ್ರ ಪ್ರತಿಭಟನೆ ನೆಡೆಸಿರುವುದು ಇತಿಹಾಸ, ಜಿಲ್ಲಾಧಿಕಾರಿ ತನಿಖೆಗೆ ಅನುಮತಿ ಕೊಟ್ಟಿದ್ದರೋ…..?! ಇಲ್ಲವೋ……?!ಅಕ್ರಮ ಕಳಪೆ ಕಾಮಗಾರಿಗೆ ಜಿಲ್ಲಾಧಿಕಾರಿ ಕೈಜೋಡಿಸಿದ್ದರೋ…!!!!!!?- ದಿನೇಶ್ ಶಿರವಾಳ*

✍️ *ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *