ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಏಓಖ ಸಂಸ್ಥೆಯ ಸೈಟ್ ಇಂಜಿನೀಯರ್ ತಾನು ವಾಸ್ತವ್ಯ ಹೂಡಿದ್ದ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿರುವ ಮನೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.
ತಮಿಳುನಾಡಿನ ಕೊಲ್ಲ ತಾಲೂಕಿನ ಮಾಧವನ್ ಎಂಬವರ ಮಗ ಅನೂಪ್ (47) ಮೃತಪಟ್ಟವರು. ಅವರು ಕೆ.ಎನ್. ಆರ್, ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಅ 21 ರಂದು ವರ್ಗಾವಣೆಗೊಂಡು ಬಂದಿದ್ದರು. ಅವರು ಪೆರ್ನೆಯಲ್ಲಿ ಮುಸ್ತಾಫ ಎಂಬವರ ಮನೆಯಲ್ಲಿ ವಾಸ್ತವ್ಯ ಹೋಡಿದ್ದರು ಎಂದು ಹೇಳಲಾಗುತ್ತಿದೆ.
ಅ 23 ರಂದು ಬೆಳಿಗ್ಗೆ ಆ ಮನೆಯ ಬೆಡ್ ರೂಮ್ ನಲ್ಲಿ ಅವರ ಮೃತ ದೇಹ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾದ ರೀತಿಯಲ್ಲಿ ನೆಲದಲ್ಲಿ ಬಿದ್ದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅ.22 ರಂದು ಮಧ್ಯಾಹ್ನ ಜೋಗಿಬೆಟ್ಟು ಎಂಬಲ್ಲಿಗೆ ತೆರಳಿದ್ದ ಅನೂಪ್ ಸಂಸ್ಥೆಯ ಸಹ ಉದ್ಯೋಗಿಗಳ ನಿವಾಸಕ್ಕೆ ತೆರಳಿ ಅಲ್ಲಿ ಮಧ್ಯಾಹ್ನದ ಭೋಜನ ಸೇವಿಸಿ ಪೆರ್ನೆಯ ಮುಸ್ತಾಫರವರ ಮನೆಗೆ ಹಿಂದುರುಗಿದ್ದರು. ಆ ದಿನ ಅವರಿಗೆ ರಜೆಯಿದ್ದ ಹಿನ್ನಲೆಯಲ್ಲಿ ಸಂಸ್ಥೆಯಲ್ಲಿದ್ದವರ ಸಂಪರ್ಕಕ್ಕೆ ಬಂದಿರಲಿಲ್ಲ. ಮಂಗಳವಾರದಂದು (ಅ 23) ವಾಹನ ಚಾಲಕ ಅನೂಪ್ ರವರಿಗೆ ಪೋನ್ ಮಾಡಿದ್ದು, ಕರೆಯನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಂಡು ಆತ ಅವರ ವಾಸ್ತವ್ಯದ ಮನೆಗೆ ಬಂದಿದ್ದ. ಆಗ ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡಿತ್ತು.