ಸಾವಳಗಿ: ಮಹಿಳೆಯರು, ಶಾಲಾ ಮಕ್ಕಳು, ಪರಸ್ಥಳದಿಂದ ಬಂದಂತ ಜನರಿಗೆ ನಿಲ್ಲಲು ಹಾಗೂ ಕುಳಿತುಕೊಳ್ಳಲು ಒಂದು ಒಳ್ಳೆಯ ಬಸ್ ನಿಲ್ದಾಣ ಇಲ್ಲದಂತಾಗಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿ ತೊದಲಬಾಗಿ ಗ್ರಾಮದ ಖಾಯಂ ನಿವಾಸಿಗಳಾದ ನಾವು ಬಸ್ ನಿಲ್ದಾಣ ನಿರ್ಮಿಸುವ ಕುರಿತು ಕೆಳಗೆ ಸಹಿ ಮಾಡಿದ ನಾವುಗಳು ವಿನಂತಿಸಿಕೊಳ್ಳುವುದು ಒಂದೇ ಒಂದು ವಿಷಯ ಶೀಘ್ರವೇ ಬಸ್ ನಿಲ್ದಾಣ ನಿರ್ಮಾಣ ಮಾಡಿ ಅಂತ.
ಮಾನ್ಯರೇ ಸಾಕಷ್ಟು ಬಾರಿ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಮೌಖಿಕವಾಗಿ ಮತ್ತು ಲಿಖಿತವಾಗಿ ವಿನಂತಿಸಿಕೊಂಡರು ಯಾವುದೇ ಉತ್ತರ ಸಿಕ್ಕಿಲ್ಲ, ಜಮಖಂಡಿ ತಾಲೂಕಿನಲ್ಲಿಯೇ ಪ್ರತಿ ಸೋಮವಾರ ದೊಡ್ಡದಾದ ಸಂತೆ ನಡೆಯುತ್ತದೆ. ಪರಸ್ಥಳದಿಂದ ಬಂದಂತಾ ಮಹಿಳೆಯರಿಗೆ ಹಾಗೂ ಪುರುಷರಿಗೆ ನಿಲ್ಲಲು ಹಾಗೂ ಕುಳಿತುಕೊಳ್ಳಲು ಬಸ್ ನಿಲ್ದಾಣ ಅವಶ್ಯವಾಗಿದೆ ಮಳೆಗಾಲದಲ್ಲಿ ಮಳೆ ಬಂದಾಗ ಅತಿ ಹೆಚ್ಚು ಸಮಸ್ಯೆಯಾಗುತ್ತದೆ.
ಬೇಸಿಗೆ ಕಾಲದಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಕುಳಿತುಕೊಳ್ಳಲು ಬಸ್ ನಿಲ್ದಾಣ ಇಲ್ಲದೆ ಗ್ರಾಮದ ಹಾಗೂ ಪರಸ್ಥಳದಿಂದ ಬಂದಂತ ಜನರು, ಅದರಲ್ಲು ಶಾಲಾ ಕಾಲೇಜು ಮಕ್ಕಳಿಗೆ ಅತಿ ಹೆಚ್ಚು ತೊಂದರೆಯಾಗುತ್ತಿದೆ ತಾವುಗಳು ದಯಮಾಡಿ ನಮ್ಮ ತೊದಲಬಾಗಿ ಗ್ರಾಮಕ್ಕೆ ಬಸ್ ನಿಲ್ದಾಣ ಮಾಡಲು ಮೊದಲ ಆದ್ಯತೆ ಕೊಟ್ಟು ನಮಗೆ ಹಾಗೂ ಜನರ ಹಿತಕ್ಕಾಗಿ ಆದಷ್ಟು ಬೇಗ ನಿರ್ಮಾಣ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಮನವಿ ಮಾಡಿದರು.
ತೊದಲಬಾಗಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಿ: ಗ್ರಾಮಸ್ಥರು
