
ಈ ಸುಂದರ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಡಾ! ವಿಜಯ ಬಲ್ಲಾಳ್ ಧರ್ಮದರ್ಶಿಗಳು ಅಂಬಲಪಾಡಿ ದೇವಸ್ಥಾನ & ಭರತನಾಟ್ಯ ಶಿಕ್ಷಕಿ ಅನನ್ಯ ಭಟ್ ಕಡೆಕಾರ್, ಉಡುಪಿಯ ಚಿತ್ರ ಕಲಾ ಸಂಘಟನೆಯ ಕಾರ್ಯದರ್ಶಿ ಚಂದ್ರ ಚಿತ್ರ, ಜಾನಪದ ಶಿಕ್ಷಕರಾದ ಪುನೀತ್,
ಸಮಾಜ ಸೇವಕ ಅಜಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಟಾಣಿಗಳಾದ ಪ್ರಗತಿ, ಪ್ರಣತಿ, ಪ್ರಸಿದ್ದಿ ಪ್ರಾರ್ಥನೆ ಗೈದರು. ಅತಿಥಿ ಅಭ್ಯಾಗತರೆಲ್ಲ ಸೇರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನಸ್ಸು ಮತ್ತು ವ್ಯಕ್ತಿತ್ವ ವಿಕಸನಕ್ಕೆ , ದೇಹದ ಸಮತೋಲನಕ್ಕೆ ಪೂರಕ.., ಮಕ್ಕಳು ಸದಾ ಕ್ರಿಯಾಶೀಲ ರಾಗಿ ರೂಪುಗೊಳ್ಳಲು ಇಂತಹ ಶಿಬಿರಗಳು ಅಗತ್ಯ ಎಂದು ಕಾರ್ಯಕ್ರಮದ ಬೆನ್ನೆಲುಬು ಎಂದು ಹೇಳಲ್ಪಡುವ ಡಾ!ವಿಜಯ ಬಲ್ಲಾಳ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪುಟಾಣಿಗಳಾದ ಪ್ರಗತಿ, ಪ್ರಣತಿ, ಪ್ರಸಿದ್ಧಿ ದೇವತಾ ಪ್ರಾರ್ಥನೆಗೈದರು. ಸಂಗೀತ ಶಿಕ್ಷಕಿ ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕುಮಾರ್ ಉಪಸ್ಥಿತರೆಲ್ಲರಿಗೂ ಧನ್ಯವಾದ ಸಲ್ಲಿಸಿದರು..