


ಬೈಂದೂರು: ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಕೆ. ಅಣ್ಣಾಮಲೈ ಅವರು ಮೇ 8ರಂದು ಬೈಂದೂರು ಕ್ಷೇತ್ರದ ವಿವಿಧಡೆಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚಿಸಲಿದ್ದಾರೆ.
ಬೆಂಳಗ್ಗೆ 8.30ಕ್ಕೆ ತ್ರಾಸಿಯಿಂದ ರೋಡ್ ಶೋ ಆರಂಭಗೊಂಡು, ಮರವಂತೆ, ನಾವುಂದ, ಅರಹೊಳೆ ಬೈಪಾಸ್ ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ, ಬಿಜೂರ್, ಯಡ್ತರೆ, ಅನಂತರ ಬೈಂದೂರು ತಲುಪಲಿದೆ.
ಅಣ್ಣಾಮಲೈ ಅವರು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲವು ವರ್ಷ ಸೇವೆ ಸಲ್ಲಿಸಿ, ದಕ್ಷತೆಯ ಮೂಲಕ ಹೆಸರು ಗಳಿಸಿದರು. ಆನಂತರ ಬಿಜೆಪಿ ಸೇರಿದ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೇ 8ರಂದು ಬೈಂದೂರು ಕ್ಷೇತ್ರಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ಮತಯಾಚನೆ ಮಾಡುತ್ತಿರುವುದು ವಿಶೇಷ. ಅವರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬಲಿದ್ದಾರೆ.



ಕೋಟ: ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಈ ದಿಸೆಯಲ್ಲಿ ಸ್ಥಳೀಯ ಸಂಘಸಂಸ್ಥೆಗಳು ಕಾರ್ಯೋನ್ಮುಖವಾಗುತ್ತಿರುವುದು ಶ್ಲಾಘನೀಯ ಎಂದು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಹೇಳಿದ್ದಾರೆ.
ನವೋದಯ ಫ್ರೆಂಡ್ಸ್ ಹರ್ತಟ್ಟು ಗಿಳಿಯಾರು ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಹರ್ತಟ್ಟು ಪರಿಸರದಲ್ಲಿ ತಾಲೂಕು ಮಟ್ಡದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಯುವ ಸಮೂಜ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಆ ಮೂಲಕ ಸಾಧನೆ ಪುಟ ತೆರೆಯಲಿ ಎಂದು ಆಶಿಸಿದರಲ್ಲದೆ ನವೋದಯ ಫ್ರೆಂಡ್ಸ್ ಸಾಮಾಜಿಕ ಕಾಳಜಿಯ ಜೊತೆ ಕ್ರೀಡೆಗೆ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ನವೋದಯ ಫ್ರೆಂಡ್ಸ್ ಹರ್ತಟ್ಟು ಅಧ್ಯಕ್ಷ ಮಹೇಶ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸದಾಶಿವ ಹೊಳ್ಳ, ಪತ್ರಕರ್ತ ರವೀಂದ್ರ ಕೋಟ,ಕಾರ್ಕಳ ಸಿವಿಲ್ ಇಂಜಿನಿಯರ್ ಪ್ರಕಾಶ್ ಆಚಾರ್ಯ ,ಓಂಕಾರ್ ಆಟೋ ವಕ್ಸ್9 ಪ್ರಕಾಶ್ ಆಚಾರ್ಯ ಬಗ್ವಾಡಿ,ಉಡುಪಿ ವೈದ್ಯಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್,ನವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ಕಿರಣ್ ಕುಮಾರ್ ಕೋಟ,ಹರ್ತಟ್ಟು ಯುವಕ ಮಂಡಲ ಅಧ್ಯಕ್ಷ ಹರೀಷ್ ದೇವಾಡಿಗ,ಕೋಟ ಗ್ರಾಮಪಂಚಾಯತ್ ಸದಸ್ಯ ಪಾಂಡು ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವೋದಯ ಫ್ರೆಂಡ್ಸ್ ಸದಸ್ಯ ನಿಖಿಲೇಶ್ ಆಚಾರ್ಯ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಶ್ರೀನಾಥ್ ಪೂಜಾರಿ ವಂದಿಸಿದರು.
ನವೋದಯ ಫ್ರೆಂಡ್ಸ್ ಹರ್ತಟ್ಟು ಗಿಳಿಯಾರು ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಹರ್ತಟ್ಟು ಪರಿಸರದಲ್ಲಿ ತಾಲೂಕು ಮಟ್ಡದ ಗ್ರಾಮೀಣ ಕ್ರೀಡಾಕೂಟವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉದ್ಘಾಟಿಸಿದರು. ನವೋದಯ ಫ್ರೆಂಡ್ಸ್ ಹರ್ತಟ್ಟು ಅಧ್ಯಕ್ಷ ಮಹೇಶ್ ಪೂಜಾರಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸದಾಶಿವ ಹೊಳ್ಳ, ಪತ್ರಕರ್ತ ರವೀಂದ್ರ ಕೋಟ,ಕಾರ್ಕಳ ಸಿವಿಲ್ ಇಂಜಿನಿಯರ್ ಪ್ರಕಾಶ್ ಆಚಾರ್ಯ ಇದ್ದರು.