• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಆಂಗ್ಲ ಭಾಷೆಯ ವ್ಯಾಮೋಹದಿಂದ ಮಾತೃಭಾಷೆಯನ್ನು ಮರೆಯದಿರಿ: ತೆಕ್ಕಟ್ಟೆ ರಮೇಶ್ ನಾಯಕ್

  • Home
  • ಆಂಗ್ಲ ಭಾಷೆಯ ವ್ಯಾಮೋಹದಿಂದ ಮಾತೃಭಾಷೆಯನ್ನು ಮರೆಯದಿರಿ: ತೆಕ್ಕಟ್ಟೆ ರಮೇಶ್ ನಾಯಕ್

ಕೋಟ:ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಭಾವನಾತ್ಮಕವಾದ ಕನ್ನಡವನ್ನು ಕಳೆದುಕೊಳ್ಳುತ್ತಿದ್ದೇವೆ. ಸರಾಗವಾಗಿ ಕನ್ನಡ ಮಾತನ್ನಾಡಬೇಕಾದ ಮಕ್ಕಳು ಇಂದು ಕನ್ನಡದಲ್ಲೇ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕನ್ನಡದ ಒಂದು ವಿಷಯ ಇದ್ದರೂ ಅದಕ್ಕೇ ಪ್ರಾಶಸ್ತ್ಯವೀಯುತ್ತಿಲ್ಲ ಯಾಕೋ ಗೊತ್ತಿಲ್ಲ. ಸಾರ್ವತ್ರಿಕವಾದ ಮಾತೃಭಾಷೆ ಕನ್ನಡದಲ್ಲಿ ಆನಂದದಿಂದ ಮಾತನಾಡುವಂತಾಗಬೇಕು. ಇದಕ್ಕೆ ಪೋಷಕರು ಮನ ಮಾಡಬೇಕು ಎಂದು ಉದ್ಯಮಿ ತೆಕ್ಕಟ್ಟೆ ರಮೇಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯ ‘ರಜಾರಂಗು-ರಂಗಮಂಚ’ ಶಿಬಿರದ ಆರನೆಯ ದಿನ ಮೇ 19ರಂದು ರಮೇಶ್ ನಾಯಕ್ ಮಾತನ್ನಾಡಿದರು. ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಉಪಸ್ಥಿತರಿದ್ದರು. ಮಾ| ತನ್ಮಯ್ ನಿರೂಪಣೆಗೈದು, ಮಾ| ಪವನ್ ಸ್ವಾಗತ ಹಾಗೂ ಧನ್ಯವಾದ ಗೈದರು. ಕು| ಹರ್ಷಿತ ವರದಿ ಸಲ್ಲಿಸಿದರು. ಬಳಿಕ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ರಂಗ ತಾಲೀಮು ನಡೆಯಿತು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯ ‘ರಜಾರಂಗು-ರಂಗಮಂಚ’ ಶಿಬಿರದ ಆರನೆಯ ದಿನ ಮೇ 19ರಂದು ರಮೇಶ್ ನಾಯಕ್ ಭಾಗವಹಿಸಿದರು.

Leave a Reply

Your email address will not be published. Required fields are marked *

ಬಾರಕೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾ ವರ್ಗದ ಸಾರ್ವಜನಿಕ ಸಮಾರಂಭವು ಬಾರ್ಕೂರು ಕಚ್ಚೂರಿನ ಶ್ರೀ ಮಾಲ್ತಿ ದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆಯನ್ನು ಕಚ್ಚೂರು ಮಾಲ್ತಿ ದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀ ಗೋಕುಲದಾಸ್ ಇವರು ವಹಿಸಿದ್ದರು. ಬೌದ್ಧಿಕ ನೀಡಿದ ಮಂಗಳೂರು ವಿಭಾಗದ ಸಹಪ್ರಚಾರ ಪ್ರಮುಖರಾದ ಶ್ರೀ ಸೂರಜ್ ಕುಮಾರ್ ಇವರು ಮಾತನಾಡಿ ಇಂತಹ ವರ್ಗಗಳಲ್ಲಿ ವ್ಯಕ್ತಿಗಳಿಗೆ ಮೌಲಿಕ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಎಂದರು. ಸಂಘ ಕಾರ್ಯಕ್ಕೆ ಶಾಖೆಯೇ ಆಧಾರ. ಶಾಖೆಯ ಮುಖಾಂತರ ಸಂಸ್ಕಾರ ಕಲಿಸುತ್ತಾ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಸಂಘವು ನಿರಂತರವಾಗಿ ಮಾಡುತ್ತಿದೆ.

ಈ ರೀತಿ ಶಿಕ್ಷಣ ಪಡೆದ ವ್ಯಕ್ತಿಗಳು ವಿವಿಧ ಕ್ಷೇತ್ರಗಳ ಮೂಲಕ ಸಮಾಜ ಪರಿವರ್ತನೆಯ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲದೆ ಪರಿಸರ ಸಂರಕ್ಷಣೆ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ್, ಧರ್ಮ ಜಾಗರಣ, ಸಾಮರಸ್ಯ, ಗೋಸೇವಾ ಮೊದಲಾದ ಗತಿ ವಿಧಿಗಳ ಮೂಲಕ ವ್ಯವಸ್ಥೆಯ ಪರಿವರ್ತನೆಯನ್ನು ಮಾಡುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ. ಸಂಘಕ್ಕೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಸಮಾಜ ಪರಿವರ್ತನೆಯ ಕಾರ್ಯದಲ್ಲಿ ವೇಗ ಕೊಡಲು ಪ್ರತಿಯೊಬ್ಬರೂ ಸಂಘ ಕಾರ್ಯದ ಜೊತೆಗೆ ಕೈಗೂಡಿಸಬೇಕೆಂದು ವಿನಂತಿಸಿದರು.

ವರ್ಗದ ವರ್ಗಾಧಿಕಾರಿಗಳಾದ ಡಾ. ಉದಯಕುಮಾರ್ ಶೆಣೈ ಕಾರ್ಕಳ ವರದಿ ವಾಚಿಸಿದರು. ವರ್ಗ ಕಾರ್ಯವಾಹರಾದ ಶ್ರೀ ಸುಜಿತ್ ಕಡಬ ಸ್ವಾಗತ ಮತ್ತು ಪರಿಚಯ ಮಾಡಿದರು. ಪ್ರಮೋದ್ ಮಂದಾರ್ತಿ ಧನ್ಯವಾದವಿತ್ತರು. ವರ್ಗದ ಬೌದ್ಧಿಕ್ ಪ್ರಮುಖರಾದ ಶ್ರೀ ಪ್ರಕಾಶ್ ಪುರೋಹಿತ್ ವೇಣೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶಿಕ್ಷಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *