


“ಪ್ರಜಾ ಪ್ರಭುತ್ವವೇ ಸಮಾಜದ ಜೀವಾಳ. ಮತದಾನವೇ ಪ್ರಜಾಪ್ರಭುತ್ವದ ಆಧಾರ ಮತ್ತು ನಮ್ಮ ಮತ ಯಾವತ್ತು ಮಾರಾಟಕ್ಕಿಲ್ಲ. ಇದೊಂದು ಪವಿತ್ರ ಕರ್ತವ್ಯ ನೆರವೇರಿಸಿ, ಮತದಾನ ಒಂದು ಪ್ರಬಲ ಅಸ್ತ್ರ – ಚಲಾಯಿಸಿ ಎಂದು ಶ್ರೀಮತಿ ಕೃಪಾ ಎಂ.ಎಂ., ನಮ್ಮ ಭೂಮಿ, The concerned for working children, Kundapura ಇವರು ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ: ಕೋಟೇಶ್ವರ ಇಲ್ಲಿ ಚುನಾವಣಾ ಸಾಕ್ಷರತ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇವರ ಜೊತೆಗೆ ಸುರೇಶ, ನಮ್ಮ ಭೂಮಿ The concerned for working children, Kundapura ಇವರು ವಿದ್ಯಾರ್ಥಿಗಳ ಜೊತೆಗೆ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೆಂದ್ರ ಎಸ್. ನಾಯಕ ವಹಿಸಿ, ಚುನಾವಣೆಯು ಪ್ರಜಾಪ್ರಭುತ್ವದ ಜೀವನಾಡಿ, ಇದೊಂದು ಬೃಹತ್ತರ ಸಾರ್ವಜನಿಕ ಚಟುವಟಿಕೆ. ಪ್ರತಿಯೊಂದು ಮನೆಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯ ಸಹಭಾಗಿತ್ವ ಖಂಡಿತವಾಗಿಯೂ ಬೇಕು. ಜನರು ಮತದಾನ ಮಾಡುವ ಮೂಲಕ ತಮ್ಮ ಆಡಳಿತ ವ್ಯವಸ್ಥೆಯನ್ನು ತಾವೇ ರೂಪಿಸಿಕೊಳ್ಳುವ ಜನರ ಪ್ರಕ್ರಿಯೆಯಾಗಿದೆ. ಮತ ಮಾರಾಟಕ್ಕಲ್ಲ. ಮತದಾನ ನಮ್ಮ ಪವಿತ್ರ ಕರ್ತವ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ರಾಮರಾಯ ಆಚಾರ್ಯ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ನಾಗರಾಜ ವೈದ್ಯ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕುಮಾರಿ ಸ್ವರೂಪ, ದ್ವಿತೀಯ ಬಿ.ಎ. ಇವರು ಪ್ರಾರ್ಥಿಸಿದರು. ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಇವರು ಸ್ವಾಗತಿಸಿದರು. ಕುಮಾರಿ ಪವಿತ್ರಾ ದೇವಾಡಿಗ, ದ್ವಿತೀಯ ಬಿ.ಎ. ಇವರು ವಂದಿಸಿದರು. ಮತ್ತು ಕುಮಾರಿ ಸಿಂಚನಾ ತೃತೀಯ ಬಿ.ಎ. ಇವರು ಕಾರ್ಯಕ್ರಮವನ್ನು ಸಂಘಟಿಸಿದರು.



ಕೋಟ: ಸಮಾಜಕ್ಕೆ ಅಗತ್ಯವಿರುವ ವಸ್ತುಗಳ ಬಗ್ಗೆ ಕಾಳಜಿ ವಹಿಸಿ ಅದನ್ನು ಧಾರೆ ಎರೆಯುವ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಕೋಟ ಅಮೃತೇಶ್ವರಿ ದೇವಳದ ಧರ್ಮದರ್ಶಿ ಆನಂದ್ ಸಿ ಕುಂದರ್ ಹೇಳಿದರು.
ಕೋಟ ಅಮೃತೇಶ್ವರಿ ದೇವಳದಲ್ಲಿ ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ವತಿಯಿಂದ ಶಿಶುಗಳಿಗೆ ಹಾಲುಣಿಸುವ ಕೊಠಡಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಸೇವೆಗೆ ನೈಜ ಅರ್ಥ ನೀಡುವ ನಿಸ್ವಾರ್ಥ ಸೇವಾ ಟ್ರಸ್ಟ್ ಸಾಮಾಜಿಕ ಬದ್ಧತೆ ಅವಿಸ್ಮರಣೀಯ ಎಂದರಲ್ಲದೆ ತೆರೆಯ ಮರೆಯಲ್ಲಿ ಸಮಾಜಸೇವೆ ಮಾಡುವ ಇಂಥಹ ಸಂಸ್ಥೆಗಳು ಗ್ರಾಮದಲ್ಲಿ ನೂರಾರು ಪಸರಿಸಲಿ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ಕೋಟ ನಿಸ್ವಾರ್ಥ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ದಾನಿ ಅಶ್ಚಥ್ ಅಮ್ಮ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ,ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ವಿದ್ಯಾ ಸಾಲಿಯಾನ್,ಪೂಜಾ ಪ್ರಶಾಂತ ಪೂಜಾರಿ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಗೌರವ ಸಲಹೆಗಾರ ಚಂದ್ರ ಪೂಜಾರಿ, ಬಾಂಧವ್ಯ ಬ್ಲಡ್ ಕರ್ನಾಟಕ ಮುಖ್ಯಸ್ಥ ದಿನೇಶ್ ಬಾಂಧವ್ಯ, ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಸುಂದರ್ ಕೆ, ಕೋಟಮೊಗವೀರ ಯುವ ಸಂಘದ ಅಧ್ಯಕ್ಷ ರಂಜೀತ್ ಕುಮಾರ್, ನಿಸ್ವಾರ್ಥ ಸೇವಾ ಟ್ರಸ್ಟ್ ನ ಗೋಪಿನಾಥ್ ಕಿಣಿ, ಸೂರ್ಯಕಾಂತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.