
ಸಾಲಿಗ್ರಾಮ- ಹೂವಿನ ಕೋಲಿನಂತಹ ಕಲಾ ಪ್ರಕಾರಗಳು ಕಣ್ಮರೆಯಾಗಬಾರದು – ಡಾ.ಕೆ.ಎಸ್ ಕಾರಂತ
ಕೋಟ: ಬಾಲ ಪ್ರತಿಭೆಗಳನ್ನು ರಜಾ ಕಾಲದಲ್ಲಿ ಮನೆ ಮನೆಗೆ ಕರೆದೊಯ್ದು ಹೂವಿನಕೋಲಿನ ರೂಪದಲ್ಲಿ ಧಾರ್ಮಿಕ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ಸತ್ಪರಂಪರೆಯನ್ನು ಪೋಷಿಸಿಕೊಂಡು ಬರುತ್ತಿರುವ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವು ಅಭಿನಂದನಾರ್ಹ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರರು ಮತ್ತು ಹೂವಿನ ಕೋಲು ತಂಡವನ್ನು ಸಾಲಿಗ್ರಾಮ ಕ್ಷೇತ್ರದ ವತಿಯಿಂದ ಪ್ರಸಾದವನ್ನು ನೀಡಿ ಶುಭವನ್ನು ಹಾರೈಸಿ ಅಭಿಪ್ರಾಯಪಟ್ಟರು.
ಮಂಗಳವಾರ ವಿಜಯದಶಮಿಯಂದು ಪ್ರದೋಷ ಕಾಲದಲ್ಲಿ ಹೂವಿನ ಕೋಲುತಂಡದ ನವರಾತ್ರಿಯ ಸಮಾರೋಪ ಕಾರ್ಯಕ್ರಮವು ದೇವಳದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯ ಅನಂತ ಪದ್ಮನಾಭ ಐತಾಳ, ಕಲಾ ಪೋಷಕರಾದ ಕಾರ್ಕಡ ವಿಶ್ವೇಶ್ವರ ಹೊಳ್ಳ, ಗುಂಡ್ಮಿ ರಾಮಚಂದ್ರ ಐತಾಳ, ಸೀತಾರಾಮ ಸೋಮಯಾಜಿ, ಕಾರ್ಕಡ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ತಾರಾನಾಥ ಹೊಳ್ಳ ದಂಪತಿ , ಐರೋಡಿ ರಮಾನಾಥ ಅಲ್ಸೆ, ದೇವಳದ ಪ್ರಬಂಧಕ ನಾಗರಾಜ ಹಂದೆ, ಹಿರಿಯ ಸಿಬ್ಬಂದಿ ಗಣೇಶ ಭಟ್ಟ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಮಂಗಳವಾರ ವಿಜಯದಶಮಿಯಂದು ಪ್ರದೋಷ ಕಾಲದಲ್ಲಿ ಹೂವಿನ ಕೋಲುತಂಡದ ನವರಾತ್ರಿಯ ಸಮಾರೋಪ ಕಾರ್ಯಕ್ರಮವು ದೇವಳದಲ್ಲಿ ನಡೆಯಿತು.