• Tue. Jul 2nd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ByKiran Poojary

Jun 29, 2024

ಸಾಲ ವಸೂಲಿ ಗೆ ತೆರಳಿದ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ 6 ಜನ ಸಿಬ್ಬಂದಿಗಳಿಂದ , ಗ್ರಾಹಕ ಈಶ್ವರ ನಾಯ್ಕ ಮೇಲೆ ಹಲ್ಲೆ- ಭಟ್ಕಳ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು .

ಭಟ್ಕಳ: ಸಾಲ ವಸೂಲಿಗೆ ತೆರಳಿದ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಸಾಲಗಾರನಿಗೆ ಕೆಟ್ಟ ಶಬ್ದದಿಂದ ಬೈದು, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಭಟ್ಕಳದ ನೀಲಾವರ ಲಾಡ್ಜ್ ಎದುರಿನ ಚಾಲುಕ್ಯ ಬಸ್ ಕಚೇರಿಯಲ್ಲಿ ನಡೆದಿದೆ.


ಭಟ್ಕಳದ ಚಾಲುಕ್ಯ ಬಸ್ ಏಜೆಂಟ್ ಈಶ್ವರ ದುರ್ಗಪ್ಪ ನಾಯ್ಕ ಹಲ್ಲೆಗೊಳಗಾದವರು. ಸೆಂಟ್ ಮಿಲಾಗ್ರೀಸ್ ನ ಸಿಬ್ಬಂದಿ ಅಜಯ ತಂದೆ ವೆಂಕಟೇಶ ನಾಯ್ಕ, ರಾಜೇಶ ತಂದೆ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ತಂದೆ ಕುಪ್ಪ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.


ಹಲ್ಲೆಗೊಳಗಾದ ಈಶ್ವರ ನಾಯ್ಕ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಕೌಟುಂಬಿಕ ಕಾರಣದಿಂದ ಸಾಲದ ಹಣವನ್ನು ತುಂಬದೇ ಬಾಕಿ ಇತ್ತು. ೧೫ ದಿನಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಯವರು ಸಾಲವನ್ನು ತುಂಬಲು ಹೇಳಿದಾಗ ಸಾಲದ ಪೂರ್ತಿ ಹಣವನ್ನು 2 ತಿಂಗಳಲ್ಲಿ ತುಂಬಿ ಕೊಡುವುದಾಗಿ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ ಜೂನ್ ೨೭ ಗುರುವಾರ ಸಂಜೆಗೆ ಆರೋಪಿತರು ಚಾಲುಕ್ಯ ಬಸ್ಸಿನ ಕಚೇರಿಯ ಒಳಗಡೆ ಬಂದು ಈಶ್ವರ ನಾಯ್ಕರಿಗೆ ಪ್ರಶ್ನೆ ಮಾಡಿದ್ದಾರೆ. ಸಾಲದ ಪೂರ್ತಿ ಹಣ ತುಂಬುವ ಯೋಗ್ಯತೆ ಇಲ್ಲವಾದರೆ ನಮ್ಮ ಬ್ಯಾಂಕಿನಲ್ಲಿ ಯಾಕೆ ಸಾಲ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಈಶ್ವರ ನಾಯ್ಕ, ಸಾಲವನ್ನು ತೀರಿಸಲು ತಮ್ಮ ಬಳಿಗೆ ಎರಡು ತಿಂಗಳ ಕಾಲಾವಕಾಸ ಕೇಳಿದ್ದೇನೆ. ಈಗ ಪೂರ್ತಿ ಹಣ ತುಂಬಲು ಹೇಳಿದರೆ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆರೋಪಿತರು ಸಾಲವನ್ನು ತೀರಿಸಲು ‘ಯೋಗ್ಯತೆ ಇಲ್ಲವಾದರೆ ಹುಲಿಯ ವೇಷ ಹಾಕಿ ಹಣವನ್ನು ಬೇಡಿ ತೀರಿಸು ಎಂದು ಕೆಟ್ಟ ಕೆಟ್ಟ ಶಬ್ದಗಳಿಂದ ಬೈದ್ದಿದ್ದಲ್ಲದೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈಶ್ವರ ನಾಯ್ಕ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಈಶ್ವರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *