• Tue. May 14th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ತೆಕ್ಕಟ್ಟೆ -ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯಲ್ಲಿ ರಕ್ಷಾ ಬಂಧನ ಆಚರಣೆ

ByKiran Poojary

Aug 31, 2023

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯಲ್ಲಿ ಆ. 30ರ ಬುಧವಾರ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಸಾಮಾಜಿಕ ಚಿಂತಕ ಚಂದ್ರಶೇಖರ್ ಪಡಿಯಾರ್ ದೀಪ ಬೆಳಗಿಸುವುದರ ಮೂಲಕ ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಹಬ್ಬ ಅಣ್ಣ- ತಂಗಿಯರ ಹಬ್ಬ ಸಹೋದರ ಸಹೋದರಿ ಎಂಬ ಭಾವನೆಯನ್ನು ಉಂಟುಮಾಡುವ ಮಹತ್ತ್ವದ ಹಬ್ಬವಾಗಿದೆ, ಸಂಘಟನೆ ಮುಖ್ಯ ಶಕ್ತಿಗಿಂತ ಯುಕ್ತಿ ಮೇಲು ಎಂದು ಉಲ್ಲೇಖಿಸಿ ಶುಭ ಕೋರಿದರು.

ಶಾಲೆಯ ಶಿಕ್ಷಕಿ ಶ್ರುತಿ ಮಾತಾಜಿ ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿ ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ ರಕ್ಷಾಬಂಧನ ಈ ದಿನದ ವಿಶೇಷತೆ ಎಂದರೆ ಪ್ರತಿಯೊಬ್ಬರು ತಮ್ಮ ಬಾಲ್ಯದ ಸಿಹಿ ಕಹಿ ನೆನಪುಗಳನ್ನು ನೆನಪಿಸಿಕೊಳ್ಳುವ ಹಬ್ಬವಾಗಿದೆ ಎಂದು ಅಭಿಪ್ರಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಟಿ. ರಮೇಶ್ ನಾಯಕ್ ವಹಿಸಿದ್ದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಟಿ. ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಋತು ಸ್ವಾಗತ ಪರಿಚಯ ಮಾಡಿದರು. ವಿದ್ಯಾರ್ಥಿಗಳು ಶ್ಲೋಕ, ಅಮೃತಬಿಂದು, ಅಮೃತವಚನ, ಮಂಕುತಿಮ್ಮನ ಕಗ್ಗ ವಾಚಿಸಿದರು .ರಕ್ಷಾ ಬಂಧನದ ಬಗ್ಗೆ ಸಾಮೂಹಿಕ ಗೀತೆಯನ್ನು ಮಕ್ಕಳು ಹಾಡಿದರು . ವಿದ್ಯಾರ್ಥಿನಿ ಚಿನ್ಮಯಿ ರಕ್ಷಾಬಂಧನದ ಸಂದೇಶ ವಾಚಿಸಿದರು. ವಿದ್ಯಾರ್ಥಿನಿ ಶ್ರೀರಕ್ಷ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ವಿದ್ಯಾರ್ಥಿ ತರುಣ್ ವಂದಿಸಿದರು.

ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯಲ್ಲಿ ಆ. 30ರ ಬುಧವಾರ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Leave a Reply

Your email address will not be published. Required fields are marked *