• Mon. May 20th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಡಿ- ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆ ಪದರೆಯ ಮೆಲೆ ವೀಕ್ಷಣೆ ಅವಕಾಶ

ByKiran Poojary

Sep 2, 2023

ಕೋಟ: ಕೋಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ , ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮ ಬಂಗೇರ ಪ್ರೌಢಶಾಲೆ, ಕೋಡಿಕನ್ಯಾಣ ಇದರ ಸಭಾಂಗಣದಲ್ಲಿ ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರಾಜೆಕ್ಟರ್ ಮೂಲಕ ಸಾರ್ವಜನಿಕರು ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.

ನಾ ಗೃಹಲಕ್ಷ್ಮೀ ನಾ ನಾಯಕಿ ಎನ್ನುವ ಬಣ್ಣ ಬಣ್ಣದ ರಂಗೋಲಿಗಳಿಂದ ಗೃಹಲಕ್ಷ್ಮೀ ಫಲಾನುಭವಿಗಳನ್ನು ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 400ಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿ, ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಸುನೀಲ್ ಕುಮಾರ್, ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ , ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜಾ, ಕೃಷ್ಣ ಪೂಜಾರಿ ಪಿ , ಸತೀಶ್ ಕುಂದರ್, ಪ್ರಸಾದ್, ವಿನಯ್ ಅಮೀನ್, ಜಯಶ್ರೀ, ಕುಸುಮ, ಕುಮಾರಿ ರಶ್ಮಿತಾ, ಕುಮಾರಿ ದೇವಕಿ , ಕುಮಾರಿ ಸರಸ್ವತಿ , ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಪಾಲಕಿ, ಗ್ರಾಮ ಸಹಾಯಕಿ , ಸಂಜೀವಿನಿ ಸಂಘದ ಎಂಬಿಕೆ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕೋಡಿ ಗ್ರಾಮಪಂಚಾಯತ್ ವತಿಯಿಂದ ರಾಜ್ಯ ಸರಕಾರದ ಗೃಹ ಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರಾಜೆಕ್ಟರ್ ಮೂಲಕ ಸಾರ್ವಜನಿಕರು ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.

Leave a Reply

Your email address will not be published. Required fields are marked *