• Thu. May 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ನಾಲ್ಕೈದು ದಿನಗಳಲ್ಲಿ ಲಾರಿ ಮಾಲಿಕರ ಸಮಸ್ಯೆ ಬಗೆಹರಿಯಲಿದೆ.
ಬಿಜೆಪಿಯವರು ಗೊಂದಲ ಸೃಷ್ಠಿಸುವ ಅಗತ್ಯತೆ ಸಲ್ಲ- ಮೊಳಹಳ್ಳಿ ದಿನೇಶ್ ಹೆಗ್ಡೆ

ByKiran Poojary

Sep 30, 2023

ಕೋಟ: ಲಾರಿ ಮಾಲಿಕ ಹಾಗೂ ಚಾಲಕ ಸಂಘ ಕೋಟ ವಲಯ ಹಾಗೂ ಜಿಲ್ಲಾದ್ಯಂತ ಲಾರಿ ಮಾಲಿಕರು ನಡೆಯುಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ಕಾಲಿಸಿದೆ.ಈ ಬಗ್ಗೆ ಉಡುಪಿ ಜಿಲ್ಲೆಯ ಶಾಸಕರು ಜಿಲ್ಲಾಡಳಿತ ಹಾಗೂ ಎಸ್ ಪಿ ಸಮ್ಮುಖದಲ್ಲಿ ಮಾತುಕತೆ ನಡೆಸಿಯೂ ಫಲಪ್ರದವಾಗದ ಹಿನ್ನಲ್ಲೆ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

ಈ ಹಿನ್ನಲ್ಲೆಯಲ್ಲಿ ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಲಾರಿ ಮಾಲಿಕರ ಚಾಲಕ ಪ್ರತಿಭಟನೆ ಹಾಗೂ ಇಲ್ಲಿನ ಮರುಳು,ಕೆಂಪು ಕಲ್ಲು,ಇತರ ಕಟ್ಟಡ ಸಾಮಾಗ್ರಿಗಳನ್ನು ಕಾನೂನು ಬದ್ಧವಾಗಿ ಜಾರಿಗೆ ತರಬೇಕು ಎಂಬ ಎಸ್.ಪಿ ಆದೇಶವನ್ನು ಮುಖಮಂತ್ರಿಗಳ ಗಮನಕ್ಕೆ ತರಲಾಗಿದೆ ನಾಲ್ಕೈದು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ.

ಬಿಜೆಪಿ ಶಾಸಕರುಗಳು ಲಾರಿ ಮಾಲಿಕರನ್ನು ಗೊಂದಲಗೊಳಿಸುವ ತಂತ್ರಗಾರಿಕೆ ಫಲ ನೀಡುವುದಿಲ್ಲ , ಮರಳು ನೀತಿಯನ್ನು ಸಮಗ್ರವಾಗಿ ಅನುಕೂಲಕರವಾಗಿ ಜಾರಿಗೆ ತರುತ್ತೇವೆ ಎಂಬ ನಳಿನ್ ಕುಮಾರ್ ಕಟೀಲ್ ತಮ್ಮ ಸರಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದಾರಾ ಎಂದು ಪ್ರಶ್ಮಿಸಿದರು.

ಈ ವೇಳೆ ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ , ಮುಖಂಡರಾದ ಭೋಜ ಪೂಜಾರಿ, ದಿನಕರ್ ಪೂಜಾರಿ, ಸುಧೀರ್ ಮಲ್ಯಾಡಿ, ಜನಾರ್ದನ್ ಪೂಜಾರಿ, ವಿನೋದ್ ದೇವಾಡಿಗ, ಪ್ರಶಾಂತ್ ಗಾಣಿಗ, ಮಹಾಬಲ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಪ್ರಮುಖರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಮತ್ತಿತರರು ಇದ್ದರು.

ಲಾರಿ ಮಾಲಿಕ ಹಾಗೂ ಚಾಲಕ ಸಂಘ ಕೋಟ ವಲಯ ನಡೆಯುಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಭೇಟಿ ನೀಡಿದರು.

Leave a Reply

Your email address will not be published. Required fields are marked *