ಕೋಟ: ಯಕ್ಷಗಾನ ಬೆಳವಣಿಗೆಯಲ್ಲಿ ಹೂವಿನಕೋಲು ಕಲಾ ಪ್ರಾಕಾರದ ಕೊಡುಗೆ ಬಹು ದೊಡ್ಡದು. ನಶಿಸುತ್ತಿದ್ದ ಈ ಕಲೆಯ ಉಳಿವಿಕೆಗಾಗಿ ಯಕ್ಷಗಾನ ಕಲಾಕೇಂದ್ರವು ಕಳೆದ ಇಪ್ಪತ್ತು ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದೆ. ಫಲಿತಾಂಶವಾಗಿ ಪರಿಸರದಲ್ಲಿ ಆರೇಳು ತಂಡಗಳು ನವರಾತ್ರಿ ಸಮಯದಲ್ಲಿ ಹೂವಿನಕೋಲು ಪ್ರದರ್ಶನ ನೀಡುತ್ತಿವೆ. ಈ ವರ್ಷ ಕೇಂದ್ರವು ಐವತ್ತರ ಸಂಭ್ರಮದಲ್ಲಿ ಹೂವಿನಕೋಲು ಅಭಿಯಾನವನ್ನು ಹಮ್ಮಿಕೊಂಡಿದೆ. ಇವರ ಪ್ರಯತ್ನ ಸಫಲವಾಗಲಿ, ಅಭಿಯಾನ ಯಶಸ್ವಿಯಾಗಲಿ ಎಂದು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಶುಭ ಹಾರೈಸಿದರು.
ಕುಂದರ್ ಅವರು ತಮ್ಮ ಗೃಹದಲ್ಲಿ ಹಮ್ಮಿಕೊಳ್ಳಲಾದ ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮದ ಪ್ರಯುಕ್ತ ಆಚರಿಸುತ್ತಿರುವ ಹೂವಿನಕೋಲು ಅಭಿಯಾನವನ್ನು ಮಕ್ಕಳಿಗೆ ಹೂವಿಕೋಲು ನೀಡುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ, ಗೀತಾ ಆನಂದ ಕುಂದರ್, ರಕ್ಷಿತ್ ಕುಂದರ್, ಪ್ರಶಾಂತ ಕುಂದರ್, ಬಸ್ರೂರು ಪ್ರಭಾಕರ ಐತಾಳ್, ಭಾಗವತ ರಾಘವೇಂದ್ರ ಮಯ್ಯ, ವಿಶ್ವೇಶ್ವರ ಹೊಳ್ಳ, ಯಕ್ಷಗಾನ ಕಲಾವಿದ ಕೋಟ ಶಿವಾನಂದ,ವಿಪ್ರ ವೇದಿಕೆ ಐರೋಡಿಯ ರಾಮನಾಥ ಅಲ್ಸೆ,ಅರವಿಂದ ಹೆಬ್ಬಾರ, ಸೀತಾರಾಮ ಸೋಮಯಾಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಹೂವಿನಕೋಲು ಇದರ ವಿವರ ನೀಡಿ, ವಂದಿಸಿದರು.
ಕುಂದರ್ ಅವರು ತಮ್ಮ ಗೃಹದಲ್ಲಿ ಹಮ್ಮಿಕೊಳ್ಳಲಾದ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮದ ಪ್ರಯುಕ್ತ ಆಚರಿಸುತ್ತಿರುವ ಹೂವಿನಕೋಲು ಅಭಿಯಾನವನ್ನು ಮಕ್ಕಳಿಗೆ ಹೂವಿಕೋಲು ನೀಡುವುದರೊಂದಿಗೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ, ಗೀತಾ ಆನಂದ ಕುಂದರ್, ರಕ್ಷಿತ್ ಕುಂದರ್, ಪ್ರಶಾಂತ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.