• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸ್ವಾಭಿಮಾನ ಸಮೃದ್ಧ ಭಾರತ ಪರಿಕಲ್ಪನೆ ಪ್ರಧಾನಿ ಸಂಕಲ್ಪ — ಮಾಜಿ ಸಚಿವ ಕೋಟ ಹೇಳಿಕೆ

ByKiran Poojary

Dec 20, 2023

ಕೋಟ: ಸ್ವಾಭಿಮಾನ ಸಮೃದ್ಧ ಭಾರತದ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿಯರ ಕನಸಿನ ಯೋಚನೆ ಯೋಜನೆಯಾಗಿತ್ತು ಅದರಂತೆ ಇಂದು ಬಲಿಷ್ಠ ಆರ್ಥಿಕ ಸಂಪದ್ಭರಿತ ರಾಷ್ಠವಾಗಿ ಮೂಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟ ಗ್ರಾಮಪಂಚಾಯತ್ ,ಲೀಡ್ ಬ್ಯಾಂಕ್, ವಿವಿಧ ಇಲಾಖೆಗಳ ಸಂಯೋಜನೆಯೊAದಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ಸರಕಾರಗಳಿರಲಿ ಜನೋಪಯೋಗಿ ಯೋಜನೆಗಳನ್ನು ಜಾತಿಮತಬೇದಗಳಿಲ್ಲದೆ ತಲುಪಿಸಲು ಕಾರ್ಯನ್ಮುಖರಾಗಬೇಕು ಕೇಂದ್ರ ಸರಕಾರ ರೂಪಿಸಿದ ವಿಶ್ವಕರ್ಮ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ತನ್ನ ಕಾಲಮೇಲೆ ನಿಲುವಂತ್ತಾಗುತ್ತದೆ ಆ ಮೂಲಕ ಸಮರ್ಥ ಭಾರತಕ್ಕೆ ಅಡಿಪಾಯ ರೂಪಿಸಲು ಸಾಧ್ಯ ಎಂದರಲ್ಲದೆ ಈ ಯೋಜನೆಯನ್ನು ಗ್ರಾಮಪಂಚಾಯತ್ ಸಮರ್ಪಕವಾಗಿ ಪ್ರತಿಯೊರ್ವ ಅರ್ಜಿದಾರನಿಗೆ ಸಮಸ್ಯೆಯಾಗದಂತೆ ನಿರ್ವಹಿಸಿ ಎಂದು ಸೂಚಿಸಿ ಇದಕ್ಕಾಗಿ ಕೇಂದ್ರ 13ಸಾವಿರ ಕೋಟಿ ರೂ ಬಿಡುಗಡೆಗೊಳಿಸಿದೆ ಆ ಮೂಲಕ ಒರ್ವ ಅರ್ಜಿದಾರನಿಗೆ 1ಲಕ್ಷದಂತೆ ಸಾಲಯೋಜನೆ ಸಿಗುವಂತ್ತಾಗಲಿ ಎಂದು ಆಶಿಸಿದರು. ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಇದೇ ವೇಳೆ ಯಾತ್ರಾ ವಾಹನದ ಡಿಜಿಟಲ್ ಪರದೆಯ ಮೇಲೆ ಸರಕಾರದ ಜನಪಯೋಗಿ ಯೋಜನೆಗಳನ್ನು ಜನಸಾಮಾನ್ಯರಿಗೆ ವಿಕ್ಷೀಸಲು ಅವಕಾಶ ನೀಡಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ನ ಇಲಾಖಾ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕೆ.ವಿಕೆ ಬ್ರಹ್ಮಾವರ ಇದರ ವಿಜ್ಞಾನಿ ರವಿ ಕುಮಾರ್,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಣೂರು ಶಾಖಾ ಪ್ರಬಂಧಕ ಚಿರಂಜಿತ್‌ದಾಸ,ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಾಧವ್ ಪೈ,ರೂಡ್ಸೆಟ್ ಸಂಸ್ಥೆಯ ಸಂತೋಷ್ ಕುಮಾರ್,ಆರೋಗ್ಯ ಮಿತ್ರ ಸಂಯೋಜಕಿ ರಜನಿ ಭಾಸ್ಕರ್,ಕುಂದಾಪುರ ದಕ್ಷಿಣ ಅಂಚೆ ವಿಭಾಗದ ಅಧಿಕಾರಿ ರಾಮಚಂದ್ರ ಡಿ.ಎನ್,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ನಿರ್ವಹಿಸಿದರು.

ಕೋಟ ಗ್ರಾಮಪಂಚಾಯತ್ ,ಲೀಡ್ ಬ್ಯಾಂಕ್, ವಿವಿಧ ಇಲಾಖೆಗಳ ಸಂಯೋಜನೆಯೊAದಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ್ ಯಾತ್ರೆ ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *