• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ದೇವಸ್ಥಾನದಲ್ಲಿ ಕಲಾ ಸೇವೆಯು ಪುಣ್ಯ ಸಂಚಯನದ ಸುಮಾರ್ಗ- ಡಾ.ಕಾರಂತ

ByKiran Poojary

Dec 31, 2023

ಕೋಟ: ಸಂಗೀತ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳಿಗೆ ದೇವಸ್ಥಾನಗಳು ಶತ ಶತಮಾನಗಳಿಂದಲೂ ಆಶ್ರಯ ಕೇಂದ್ರಗಳಾಗಿರುವುದು ಐತಿಹಾಸಿಕ ವಾಸ್ತವವಾಗಿದ್ದು, ತನ್ಮೂಲಕ ಕಲಾವಿದರಿಗೆ ಮತ್ತು ಕಲಾಭಿಮಾನಿ ಭಕ್ತರಿಗೆ ಪುಣ್ಯ ಲಭಿಸುತ್ತದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶಿವಮೊಗ್ಗೆಯ ಪುಷ್ಪಲತಾ ಪ್ರಕಾಶರಿಂದ ತರಬೇತಿ ಹೊಂದಿದ ಶ್ರೀಮತಿ ಪಲ್ಲವಿ ಶ್ರೀನಿವಾಸ ನೇತೃತ್ವದ ಶ್ರುತಿ ಲಯ ತಂಡದವರ ಭರತನಾಟ್ಯ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುತ್ತ ಅಭಿಪ್ರಾಯ ಪಟ್ಟರು. ಡಿ.30ರ ಶನಿವಾರದಂದು ಧನುರ್ಮಾಸದ ವಿಶೇಷ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆಯವರು ವಂದಿಸಿದರು. ಈ ಸಂದರ್ಭದಲ್ಲಿ ಕಲಾ ಪೋಷಕರಾದ ಸೂರ್ಯ ನಾರಾಯಣ ಅಲ್ಸೆ, ಬಾರ್ಕೂರು ನಾಗರಾಜ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶಿವಮೊಗ್ಗೆಯ ಪುಷ್ಪಲತಾ ಪ್ರಕಾಶರಿಂದ ತರಬೇತಿ ಹೊಂದಿದ ಪಲ್ಲವಿ ಶ್ರೀನಿವಾಸ ನೇತೃತ್ವದ ಶ್ರುತಿ ಲಯ ತಂಡದವರ ಭರತನಾಟ್ಯ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಲಾ ಪೋಷಕರಾದ ಸೂರ್ಯ ನಾರಾಯಣ ಅಲ್ಸೆ, ಬಾರ್ಕೂರು ನಾಗರಾಜ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *