• Sun. May 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ವಿಶ್ವ ದಾಖಲೆ ಪಟ್ಟ ಮಡಿಗೆರಿಸಿಕೊಂಡ ಪೆನ್ಸಿಲ್ ರಾಮಮಂದಿರ

ByKiran Poojary

Jan 30, 2024

ನ್ಯಾನೋ ಗಣೇಶ ಖ್ಯಾತಿಯ ಯುವ ಮೈಕ್ರೋ ಕಲಾವಿದ ಗಿನಿಸ್ ವಿಜೇತ ಸಂಜಯ್ ದಯಾನಂದ ಕಾಡೂರು ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠೆ ನಿಮಿತ್ತ ರಚಿಸಿದ ಪೆನ್ಸಿಲ್ ಲೆಡ್ ನ ಮಿನೆಚರ್ ಪ್ರತಿಕೃತಿ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿ ಜನಮೆಚ್ಚುಗೆ ಪಡೆದಿತ್ತು.

ದಿನಾಂಕ 22 ಜನವರಿ 2024 ರಂದು ಅಯೋದ್ಯೆ ರಾಮ ಮಂದಿರ ಲೋಕಾರ್ಪಣೆ ಸಂದರ್ಭ ವಿಶೇಷ ಆಹ್ವಾನ ಪಡೆದಿದ್ದ ಸಂಜಯ್ ದಯಾನಂದ್ ಕಾರ್ಯಕ್ರಮ ದಲ್ಲಿ ಪಾಲ್ಗೊಂದಿದ್ದು ತಮ್ಮ ಪ್ರತಿಭೆಯಿಂದ ಎಲ್ಲರ ಮನ ಗೆದ್ದ ಬೆನ್ನಲ್ಲೇ ಈ ಕಲಾಕೃತಿ ವಿಶ್ವ ದಾಖಲೆ ಪಡೆಯುವ ಅರ್ಹತೆ ಪಡೆದಿದೆ ಎಂಬುದು ದೃಢಪಟ್ಟಿದೆ

1mm ನ HB ಪೆನ್ಸಿಲ್ನಲ್ಲಿ ರಚಿಸಲ್ಪಟ್ಟ ಈ ರಾಮಮಂದಿರ ಕಲಾಕೃತಿ ಒಂದು ಸಾಸಿವೆ ಕಾಳಿನ ಅಳತೆಗೆ ಸರಿಯಾಗಿ ಇದೆ ಇಷ್ಟು ಚಿಕ್ಕದಾಗಿ ರಚಿಸಲ್ಪಟ್ಟರು ಸಹ ನಿಜವಾದ ರಾಮಮಂದಿರ ದಲ್ಲಿ ಇರುವ ಸೂಕ್ಷ್ಮ ಸಮಾನತೆಗಳು ಸರಿಸಾಮಾನವಾಗಿ ಕಾಣುವುದರಿಂದ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ

ಈಗಾಗಲೇ 2 ವಿಶ್ವ ದಾಖಲೆ ಪಡೆದು ಏಷ್ಯಾದಾ 100 ಸಾಧಕರ ಪಟ್ಟಿಯಲ್ಲಿ 57 ಹಾಗೂ ಭಾರತದ ಟಾಪ್ 10 ಸಾಧಕರಲ್ಲಿ 3ನೇ ಸ್ಥಾನ ಪಡೆದಿದ್ದ ಸಂಜಯ್ ರಾಮಮಂದಿರ ಪ್ರತಿಕೃತಿ ನಿರ್ಮಾಣದೊಂದಿಗೆ ಭಾರತದ ಟಾಪ್ 1 ಸ್ಥಾನಕ್ಕೆ ಬರುವ ಸಾಧ್ಯತೆಗಳು ಅಧಿಕವಾಗಿದೆ ಎಂಬ ಪ್ರತಿಕ್ರಿಯೆಗಳು ಬರುತ್ತಿದೆ

Leave a Reply

Your email address will not be published. Required fields are marked *