• Mon. May 13th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕಾರ್ಕಡ- ಅವೈಜ್ಞಾನಿಕ ಮರಳು ಗಣಿಗಾರಿಕೆಯ ಸ್ಥಳ ಸರ್ವೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕೃಷಿಕರ ಆಕ್ರೋಶ

ByKiran Poojary

Feb 28, 2024

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಕಾರ್ಕಡದ ಚಕ್ಕಿಜಡ್ಡಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮರಳು ಗಣಿಗಾರಿಕೆಯ ವಿರುದ್ಧ  ಸ್ಥಳೀಯ ಕೃಷಿಕರು ವಿರೋಧದ ಹೊರತಾಗಿಯೂ ಸ್ಥಳದಲ್ಲಿ ಮರುಳುಗಾರಿಕೆ ನಿರಾತಂಕವಾಗಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ರೈತರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದು ಸರಕಾರಿ ಸ್ಥಳದಲ್ಲಿ ಹೈನುಗಾರರು ಮಳೆಗಾಲದ ಸಂದರ್ಭದಲ್ಲಿ ದನಕರುಗಳ  ಮೇವಿಗಾಗಿ  ಭೂಮಿ ನಮಗೆ ಪುನಃ ಸರ್ವೆ ಮಾಡಿ ನೀಡಬೇಕು ಎಂಬ ಬೇಡಿಕೆ ಇರಿಸಿದೆ, ಈ ಬಗ್ಗೆ ತಹಶಿಲ್ದಾರ್ ಹಾಗೂ ಗಣಿ ಅಧಿಕಾರಿಗಳು ಬುಧವಾರ ಸ್ಥಳದ ಸರ್ವೆ ಕಾರ್ಯ ನಡೆಸಿದ್ದು ರೈತರಿಗೆ ಅಥವಾ ದೂರುದಾರಿಗೆ ಮಾಹಿತಿ ನೀಡದೆ ಅವರಷ್ಟಕ್ಕೆ ಮರಳುಗಾರಿಕೆಯವರ ಸಮ್ಮುಖದಲ್ಲಿ ನೆಪಕ್ಕೆ ಸರ್ವೆ ನಡೆಸಿದ್ದಾರೆ ಅಲ್ಲದೆ ಗ್ರಾಮಸ್ಥರಿಗೆ ಒಳ ಪ್ರವೇಶಿಸದಂತೆ ನಿರಾಕರಿಸಿದ್ದಾರೆ ಇದರ ವಿರುದ್ಧ ಗ್ರಾಮಸ್ಥರು ಆಕ್ಷೇಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.  ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ  ತಶಿಲ್ದಾರರು ಹಾಗೂ ಗಣಿ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಗ್ರಾಮಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸರ್ವೆ ಕಾರ್ಯ ಗ್ರಾಮಸ್ಥರ ಸಮ್ಮುಖದಲ್ಲೆ ನಡೆಯಲಿ.
ಒಂದೆಡೆ ಮರಳುಗಾರಿಕೆ ನಡೆಯುತ್ತಿದ್ದು ಇಲ್ಲಿನ ಸುತ್ತಮುತ್ತಲಿನ ಸರಕಾರಿ ಸ್ಥಳಗಳ ಸರ್ವೆ ಕಾರ್ಯ ಕೃಷಿಕರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ

ಅಳತೆ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರನ್ನು ತಡೆದು ನಿಲ್ಲಿಸಿದ್ದು, ಈ ಬಗ್ಗೆ ಮಾನ್ಯ ತಹಶೀಲ್ದಾರ್  ಕೂಡ ಮೌನವಹಿಸಿದ್ದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೇ ಆಗಿದೆ.ಜೊತೆಗೆ ಗ್ರಾಮಸ್ಥರ ಕರೆಯ ಮೇರೆಗೆ ಅಳತೆಗೆ ಬಂದಿದ್ದರಿAದ, ಗ್ರಾಮಸ್ಥರ ಸಮ್ಮುಖದಲ್ಲಿಯೇ ಈ ಸರ್ವೆ ಪ್ರಕ್ರಿಯೆ ಅದು ಪಾರದರ್ಶಕ ನಡೆಯಬೇಕಿತ್ತು.ಆದರೆ ಇಂದು ನಡೆದದ್ದು ಸರ್ವಾಧಿಕಾರಿ ಧೋರಣೆ.ಮತ್ತದು ಆಕ್ಷೇಪಾರ್ಹ.ಜೊತೆಗೆ ಅಲ್ಲಿ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ಅಮ್ಮನವರು, ಮೂಡುಹೊಳಿ ಇದರ ಪರಿವಾರ ದೈವದ ಸಾನಿಧ್ಯವೂ ಇದ್ದು, ಇದು ಗ್ರಾಮಸ್ಥರ ಧಾರ್ಮಿಕ ಭಾವನೆಗೆ ದಕ್ಕೆ ತರುವಂಥ ವಿಚಾರವಾಗಿದೆ.

ಸ್ಥಳೀಯ ಕೃಷಿಕರು ಸಂಜಯ್ ಕಾರ್ಕಡ

ಗ್ರಾಮಸ್ಥರ ದೂರಿನ ಅನ್ವಯ ನಾವು ಸ್ಥಳ ಸರ್ವೆ ನಡೆಸಿದ್ದೇವೆ ಸರಕಾರಿ ಸ್ಥಳವನ್ನು ಗುರುತು ಪತ್ತೆ ಹಚ್ಚಿ ಅಲ್ಲಿ ಗಡಿಕಲ್ಲನ್ನು ಹಾಕಿದ್ದೇವೆ ಪ್ರಸ್ತುತ ಹೊಳೆ ಪಥ ಬದಲಿಸಿದ್ದು ಬೆಟ್ಟು ಬಿದ್ದ ಸ್ಥಳ ಸರಕಾರಿ ಸ್ಥಳ ಎಂದು ಗುರುತಿಸಿದ್ದು ಸರ್ವೆಕಾರ್ಯದಲ್ಲಿ ಕೆಲ ಗ್ರಾಮಸ್ಥರು  ಉಪಸ್ಥಿತರಿದ್ದರು. ಎಂದು ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *