• Tue. May 14th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಂಪೂರ್ಣ ಡಿಜಿಟಲ್ ಸಾಕ್ಷರತ ಗ್ರಾಮವಾಗಿ ಕೋಟತಟ್ಟು ಗ್ರಾಮ ಆಯ್ಕೆ , ಪಂಚಾಯತ್ ಅಧ್ಯಕ್ಷ ಸತೀಶ್ ಹರ್ಷ

ByKiran Poojary

Aug 31, 2023

ಸಂಪೂರ್ಣ ಡಿಜಿಟಲ್ ಸಾಕ್ಷರತ ಗ್ರಾಮವಾಗಿ ಕೋಟತಟ್ಟು ಗ್ರಾಮ ಆಯ್ಕೆ , ಪಂಚಾಯತ್ ಅಧ್ಯಕ್ಷ ಸತೀಶ್ ಹರ್ಷ

ಕೋಟ : ಗ್ರಾಮಗಳು ದೇಶದ ಜೀವನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮಗಳ ಅಭಿವೃದ್ಧಿಯು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಮದ ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಚಟುವಟಿಕೆಗಳಿಗೆ ಅವಶ್ಯಕವಾಗಿರುವ ಜ್ಞಾನ ಮತ್ತು ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ, ಅದರಲ್ಲೂ ಡಿಜಿಟಲ್ ಜ್ಞಾನದ ಬಗ್ಗೆ ಅರಿವನ್ನು ಪಡೆದುಕೊಳ್ಳುವುದು ಹಾಗು ಪಡೆದುಕೊಂಡಂತಹ ಜ್ಞಾನವನ್ನು ತಮ್ಮ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದು ಸಹ ಬಹಳ ಮುಖ್ಯ. ನಗರ ಪ್ರದೇಶದ ಸಮುದಾಯಕ್ಕೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಸಮುದಾಯದಲ್ಲಿ ಡಿಜಿಟಲ್ ಬಳಕೆ ಮಾಹಿತಿಯ ಅರಿವು ಅವಶ್ಯಕವಾಗಿರುವುದು ನಮಗೆಲ್ಲ ತಿಳಿದಿರುವ ವಿಷಯ.

ಲಭ್ಯವಿರುವ ಡಿಜಿಟಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲು ಪೂರಕವಾದ ತರಬೇತಿಯ ಅವಶ್ಯಕತೆ ಇದೆ. ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ, ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ರಾಜ್ಯದ 35 ಗ್ರಾಮದ ಜನರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಯೋಜನೆಯನ್ನು ಮಾಡಲಾಗಿದೆ . ಉಡುಪಿ ಜಿಲ್ಲೆಯಿಂದ ಈ ಯೋಜನೆಗೆ ಕೋಟತಟ್ಟು ಗ್ರಾಮ ಪಂಚಾಯತ್ ಮಾತ್ರ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಗ್ರಾಮದಲ್ಲಿರುವ ಎಲ್ಲಾ ಜನರು ತಮ್ಮ ನಿತ್ಯಜೀವನದ ಚಟುವಟಿಕೆಗಳಲ್ಲಿ ವ್ಯವಹರಿಸಲು ಬೇಕಾದ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವನ್ನು ಪಡೆದುಕೊಳ್ಳುವುದು ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಹೊಂದುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಡಿಜಿಟಲ್ ಸಾಧನಗಳನ್ನು ಬಳಸುವ ಕುರಿತು ಹಾಗೂ, ಆನ್‍ಲೈನ್ ಫ್ಲಾಟ್‍ಫಾರಂಗಳನ್ನು ಸುರಕ್ಷಿತವಾಗಿ ಹೇಗೆ ಬಳಕೆ ಮಾಡಬಹುದು ಮತ್ತು ಡಿಜಿಟಲ್ ಸೇವೆಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಮಾಹಿತಿಗಳ ಪ್ರಯೋಜನಗಳನ್ನು ಈ ಕಾರ್ಯಕ್ರಮದ ಮೂಲಕ ಪಡೆದುಕೊಳ್ಳಬಹುದು ,ಮುಖ್ಯವಾಗಿ ಸ್ಮಾರ್ಟ್ ಫೆÇೀನ್ ಬಳಕೆ, ಡಿಜಿಟಲ್ ಡಿವೈಸ್, ಸರ್ಚ್ ಮತ್ತು ಅಂತರ್ಜಾಲ ಸುರಕ್ಷತೆ, ಸಂವಹನ ಮಾಧ್ಯಮ ಮತ್ತು ಆನ್‍ಲೈನ್ ಫ್ಲಾಟ್‍ಫಾರಂಗಳು, ಇ- ಬ್ಯಾಂಕಿಂಗ್ ಬಗ್ಗೆ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಗ್ರಾಮದ ನಾಗರಿಕರಿಗೆ ಮಾಹಿತಿಗಳು ದೊರೆಯುತ್ತದೆ. ಇದರ ಸಂಪೂರ್ಣ ಪ್ರಯೋಜನವನ್ನು ಕೋಟತಟ್ಟು ಗ್ರಾಮದ ನಾಗರಿಕರು ಪಡೆದುಕೊಳ್ಳಬೇಕಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *