• Tue. May 14th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ಗ್ರಾಮಪಂಚಾಯತ್‍ನಲ್ಲಿ ಗೃಹಲಕ್ಷ್ಮೀ ಯೋಜನೆ ವೀಕ್ಷಣೆ ಅವಕಾಶ, ಕಾರ್ಯಕ್ರಮ ಆಯೋಜನೆ

ByKiran Poojary

Aug 31, 2023

ಕೋಟ: ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ರೂ 2000/- ಗಳನ್ನು ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದು. ಈಗಾಗಲೇ ಈ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ, ಆ.30ರಂದು ಮೈಸೂರಿನಲ್ಲಿ ಈಯೋಜನೆಯನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಲೋಕಾರ್ಪಣೆಗೊಳಿಸಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ಫಲಾನುಭವಿಗಳು, ಸಾರ್ವಜನಿಕರು, ಭಾಗಿಯಾಗಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಕೋಟ ಗ್ರಾಮ ಪಂಚಾಯತ್‍ನ ಸಭಾಂಗಣದಲ್ಲಿ ಪ್ರೋಜೆಕ್ಟರ್ ಪರದೆಯ ವ್ಯವಸ್ಥೆಯನ್ನು ಮಾಡಲಾಯಿತು. ಸಾಕಷ್ಟು ಫಲಾನುಭವಿಗಳು ಇದನ್ನು ವಿಕ್ಷೀಸಿದರು.

ಯೋಜನೆಯನ್ನು ಗ್ರಾಮದ ಎಲ್ಲಾ ಮಹಿಳೆಯರು ನೋಂದಾಯಿಸಿಕೊಂಡು ಪ್ರಯೊಜನ ಪಡೆಯಲು ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಹೇಳಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರು ಹಾಗೂ ನೋಡಲ್‍ಅಧಿಕಾರಿ ಡಾ.ಅನಿಲ್ ಕುಮಾರ್ ,ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆಯರು , ಕಾರ್ಯದರ್ಶಿ ಪೂರ್ಣಿಮಾ , ಲೆಕ್ಕ ಸಹಾಯಕ ಶೇಖರ್ ಹಾಗೂ ಸಿಬ್ಬಂದಿಯವರು ಹಾಜರಿದ್ದರು.

ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದು. ಈಗಾಗಲೇ ಈ ಯೋಜನೆಯಡಿ ನೋಂದಣಿ ಯಾಗಿರುವ ಫಲಾನುಭವಿಗಳಿಗೆ ಬುಧವಾರ ಕೋಟ ಗ್ರಾಮಪಂಚಾಯತ್ ಬೃಹತ್ ತೆರದ ಪರದೆಯ ಮೇಲೆ ವಿಕ್ಷೀಸುವ ಕಾರ್ಯಕ್ರಮದಲ್ಲಿ ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಮಾತನಾಡಿದರು.

Leave a Reply

Your email address will not be published. Required fields are marked *